ಬನಹಟ್ಟಿ ಬಳಿ ನಿರ್ಮಿಸಲಾದ ಬಾಂದಾರದ ಹಳ್ಳದ ನೀರು ತುಂಬಿ ಹರಿಯುತ್ತಿದ್ದು, ರಸ್ತೆ ಸಂಪೂರ್ಣ ಮುಳುಗಿದ್ದು ಸಂಚಾರ ಬಂದ್ ಆಗಿರುವದು.
ಭಾರಿ ಮಳೆಗೆ ರಸ್ತೆ ಬಂದ್
ರಬಕವಿ-ಬನಹಟ್ಟಿ,ಅ14: ಭಾರಿ ಮಳೆಗೆ ರೈತಾಪಿ ವರ್ಗಕ್ಕೆ ಭಾರಿ ತೊಂದರೆಯಾಗುವದರ ಮೂಲಕ ಕೆಲ ಬೆಳೆಗಳು ನೆಲಕಚ್ಚಿದ್ದರೆ, ಇನ್ನು ಕೆಲವು ನಾಶದತ್ತ ಸಾಗಿವೆ.
ಬನಹಟ್ಟಿಯ ಹಳೆಯ ನ್ಯಾಯಾಲಯ, ಹೈಸ್ಕೂಲ್ ರಸ್ತೆಗೆ ಸಾಗುವ ಬಾಂದಾರ ಸಮೀಪ ಹಳ್ಳದ ರಸ್ತೆ ಸಂಪೂರ್ಣ ಜಲಾವೃತಗೊಂಡಿರುವ ಹಿನ್ನಲೆ ರೈತರು ಸೇರಿದಂತೆ ಈ ಭಾಗದ ಜನತೆಯು ಮಾರುಕಟ್ಟೆಗೆ ತೆರಳುವಲ್ಲಿ ತೊಂದರೆಯುಂಟಾಗಿದೆ.

Social Plugin