ಬನಹಟ್ಟಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆಗೊಂಡ ಸಿದ್ದು ಸವದಿ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಕೈಗೊಂಡರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸಿದ್ದು ಸವದಿ ಸ್ಪರ್ಧೆ

ರಬಕವಿ-ಬನಹಟ್ಟಿ,ಅ5: ಶಾಸಕ ಸಿದ್ದು ಸವದಿ ರಬಕವಿ ಬನಹಟ್ಟಿ ತಾಲ್ಲೂಕು ಹಾಗೂ ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ವತಿಯಿಂದ  ಬಿಡಿಸಿಸಿ ಬ್ಯಾಂಕ್ನ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.

ಭಾನುವಾರ ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನಕ್ಕೆ ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿ ಸಿದ್ದು ಸವದಿ ಪೂಜೆ ಸಲ್ಲಿಸಿ ಪತ್ರಿಕೆಯ ಜೊತೆಗೆ ಮಾತನಾಡಿ, ಪಕ್ಷದ ಮುಖಂಡರ ಮತ್ತು ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ಮತ್ತು ಅನಿವಾರ್ಯವಾಗಿ ಸ್ಪರ್ಧಿಸುತ್ತಿದ್ದೇನೆ. ಈ ಭಾಗದ ರೈತರ ಮತ್ತು ನೇಕಾರರನ್ನು ಆರ್ಥಿಕವಾಗಿ ಸಬಲರಾಗಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಸವದಿ ತಿಳಿಸಿದರು.

ಇದೇ ಸಂದರ್ಭದಲ್ಲಿ ನೇಕಾರರ ಸಹಕಾರಿ ಸಂಘಗಳ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಬಾಣಕಾರ ಸ್ಪರ್ಧಿಯಾಗಿದ್ದು, ಅವರು ಕೂಡಾ ಈ ದೇವರ ದರ್ಶನ ಪಡೆದುಕೊಂಡು ಪ್ರಚಾರ ಕಾರ್ಯ ಕೈಗೊಂಡರು.

ಈ ಸಂದರ್ಭದಲ್ಲಿ ಧರೆಪ್ಪ ಉಳ್ಳಾಗಡ್ಡಿ, ರಾಜು ಅಂಬಲಿ, ಸುರೇಶ ಅಕ್ಕಿವಾಟ, ಸಿದ್ದನಗೌಡ ಪಾಟೀಲ,ಸುರೇಶ ಚಿಂಡಕ, ಡಾ.ಪಿ.ವಿ.ಪಟ್ಟಣ, ಸಿದ್ರಾಮ ಸವದತ್ತಿ, ಕುಮಾರ ಕದಮ, ಬ್ರಿಜ್ಮೋಹನ ಡಾಗಾ, ಶ್ರೀಶೈಲ ಬೀಳಗಿ, ಆನಂದ ಕಂಪು, ಸವಿತಾ ಹೊಸೂರ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಪವಿತ್ರಾ ತುಕ್ಕನ್ನವರ, ಸುವರ್ಣಾ ಕೊಪ್ಪದ, ಶಾಂತಾ ಸೋರಗಾವಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.