ಹಿಪ್ಪರಗಿಯ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಎಸ್. ಎಸ್ ಖಾನಗೌಡ್ರ ತೋಟದಲ್ಲಿ ಹಮ್ಮಿಕೊಂಡ ವಿದ್ಯಾಧಿಪತಿ ನೂತನ ಮಾದರಿಯ ಉದ್ಘಾಟನೆ ನೆರವೆರಿಸಿದ ತಾ. ಪಂ. ಕಾರ್ಯನಿರ್ವಾಕ ಅಧಿಕಾರಿ ಅಭೀದ ಗದ್ಯಾಳ
ಮಕ್ಕಳ ಕಲಿಕೆಗೆ ಉತ್ತಮ ವಾತಾವರಣವಿರಲಿ ರಬಕವಿ-ಬನಹಟ್ಟಿ,ಸೆ5: ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿ ಎಂದು ಜಮಖಂಡಿ ತಾಲೂಕು ಪಂಚಾಯತಿ ಕಾರ್ಯನಿರ್ವಾಕ ಅಧಿಕಾರಿಗಳಾದ ಅಭೀದ್ ಗದ್ಯಾಳ ಹೇಳಿದರು. ಅವರು ತಾಲೂಕಿನ ಹಿಪ್ಪರಗಿಯ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಎಸ್. ಎಸ್ ಖಾನಗೌಡ್ರ ತೋಟದಲ್ಲಿ ಹಮ್ಮಿಕೊಂಡ ವಿದ್ಯಾಧಿಪತಿ ನೂತನ ಮಾದರಿಯ ಉದ್ಘಾಟನೆ ನೆರವೆರಿಸಿ ಮಾತನಾಡಿದರು. ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಶಿಕ್ಷಕ ವೃತ್ತಿ ಪವಿತ್ರವಾದುದು. ಮಕ್ಕಳಲ್ಲಿ ಕ್ರಿಯಾತ್ಮಕತೆ ಬೆಳೆಸುವುದರಿಂದ ಅವರ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಂತಾಗುತ್ತದೆ. ಶಿಕ್ಷಕರಾದವರು ಒಂದು ನಿರ್ಧಿಷ್ಟವಾದ ಗುರಿಯನ್ನು ಹೊಂದಿರಬೇಕು. ತಾವು ಕಲಿಯುವುದರ ಜೊತೆಗೆ ಮಕ್ಕಳನ್ನು ಕ್ರಿಯಾತ್ಮಕವಾಗಿ ಬೆಳೆಸಬೇಕು. ಇಲ್ಲಿನ ಶಿಕ್ಷಕರಾಧ ಶಿವು ಯಾದವಾಡ ಅವರು ನಿರ್ಮಿಸಿರುವ ವಿದ್ಯಾಧಿಪತಿ ನೂತನ ಮಾದರಿಯೂ ತುಂಬಾ ಅದ್ಭುತವಾಗಿದ್ದು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಇಂತಹ ಪ್ರಯತ್ನಗಳು ಅವರಿಂದ ಇನ್ನಷ್ಟು ಮೂಡಿಬರಲಿ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಎಂ. ನೇಮಗೌಡ ಮಾತನಾಡಿ, ಜಾಗತೀಕ ಮಟ್ಟದಲ್ಲಿ ತುಂಬಾ ಸ್ಪರ್ಧೆ ಎದುರಿಸಬೇಕಾಗಿದ್ದು ಮಕ್ಕಳನ್ನು ಆ ನಿಟ್ಟಿನಲ್ಲಿ ತಯಾರಿ ಮಾಡಬೇಕಾಗಿದೆ. ಮಕ್ಕಳಲ್ಲಿ ಅಘಾದ ಶಕ್ತಿಯನ್ನು ಗುರುತಿಸಿ ಅದನ್ನು ಬೆಳಕಿಗೆ ತರುವ ಕಾರ್ಯವನ್ನು ನಮ್ಮ ಶಿಕ್ಷಕರು ಮಾಡಬೇಕಿದೆ. ಪ್ರಚಲಿತ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಕರು ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಇದ್ದರಿಂದ ಮಕ್ಕಳ ಅದ್ಭುತ ಶಕ್ತಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ ಎಂದರು. ಎಸ್‍ಡಿಎಂಸಿ ಅಧ್ಯಕ್ಷರಾದ ಎಸ್. ಎಸ್ ಖಾನಗೌಡ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಶಿಕ್ಷಣ ಸಂಯೋಜಕರು, ಡಿ. ಎಂ. ಗಲಗಲಿ, ಬಿ. ಆರ್. ಪಿ ಎಸ್. ಆರ್. ಮದ್ನೂರ, ಸಿಆರ್‍ಪಿ ಪ್ರಶಾಂತ ಹೊಸಮನಿ, ಮುಖ್ಯ ಗುರುಗಳಾದ ಉಮೇಶ ಗಂಜ್ಯಾಳ, ಶಿವು ಯಾದವಾಡ, ಶಿವಾಜಿ ನಾಯಕ ವೇದಿಕೆ ಮೇಲಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಣ ತುಪ್ಪದ, ಈರಪ್ಪ ವಜ್ರಮಟ್ಟಿ, ರಮೇಶ ಜತ್ತಿ, ವಿಶ್ವನಾಥ ಬೀಳಗಿ, ಡಬ್ಲ್ಯೂ. ವಾಯ್. ಭಜಂತ್ರಿ, ಯೋಗಿಶ ಬಿ. ಸಿ., ಎಲ್. ಎಚ್. ಹಂಜಗಿ, ಬಿ. ಎಸ್. ಪಾಟೀಲ, ಈಶ್ವರ ಬಿಳ್ಳೂರ ಸೇರಿದಂತೆ ಅನೇಕರು ಇದ್ದರು.
Social Plugin