ರಬಕವಿಯ ಭಾರತ ಗ್ಯಾಸ ಸಿಬ್ಬಂದಿ ಬ್ರಹ್ಮಾನಂದ ಕೋಪರ್ಡೆ ಮೃತಪಟ್ಟ ಹಿನ್ನಲೆಯಲ್ಲಿ ಅವರ ಧರ್ಮಪತ್ನಿ ಲಕ್ಷ್ಮಿ  ಕೋಪಡೆ9 ಯವರಿಗೆ ಐದು ಲಕ್ಷ ರೂಪಾಯಿಗಳ ಚೆಕ್‍ನ್ನು ಭಾರತ ಗ್ಯಾಸ್‍ನ ಧಾರವಾಡ ವಲಯದ ವ್ಯವಸ್ಥಾಪಕರಾದ ಧೀರಜ ಕುಮಾರ ಶಾಹು ವಿತರಿಸಿದರು.

ಸ್ವಚ್ಛತೆ ಮತ್ತು ಸುರಕ್ಷಿತವಾಗಿರಿ

 * ನಿಧನ ಹೊಂದಿದ ಭಾರತ ಗ್ಯಾಸ ಸಿಬ್ಬಂದಿ ಕುಟುಂಬಕ್ಕೆ 5 ಲಕ್ಷ ರೂಗಳ ಧನ ಸಹಾಯ 

ರಬಕವಿ-ಬನಹಟ್ಟಿ,ಅ5: ರಬಕವಿಯ ಭಾರತ್ ಗ್ಯಾಸ್ ಸರ್ವಿಸ್ ಸೆಂಟರ್ ಸಭಾಂಗಣದಲ್ಲಿ ಭಾರತ ಪೆಟ್ರೋಲಿಯಂ ಕಾಪೆರ್Çರೇಷನ್ ಲಿ ದಿಂದ ಎಕ್ಸ್- ಗ್ರೇಟಿಯ ಯೋಜನೆಯಲ್ಲಿ ಇತ್ತೀಚೆಗೆ ಭಾರತಗ್ಯಾಸ ಸಿಬ್ಬಂದಿ ಬ್ರಹ್ಮಾನಂದ ಕೋಪರ್ಡೆ ಮೃತಪಟ್ಟ ಹಿನ್ನಲೆಯಲ್ಲಿ ಅವರ ಧರ್ಮಪತ್ನಿ ಲಕ್ಷ್ಮಿ  ಕೋಪಡೆ9 ಯವರಿಗೆ ಐದು ಲಕ್ಷ ರೂಪಾಯಿಗಳ ಚೆಕನ್ನು ಧಾರವಾಡ ವಲಯದ ವ್ಯವಸ್ಥಾಪಕರಾದ ಧೀರಜ ಕುಮಾರ ಶಾಹು ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಕಳೆದ ತಿಂಗಳು 17ರಂದು ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು ನಮ್ಮ ಭಾರತ ಗ್ಯಾಸ್ ಪರಿವಾರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿದರು. ಅದೇ ರೀತಿ ಧಾರವಾಡ ವಲಯದ ವಿತರಕರ ಸಂಘದ ವತಿಯಿಂದ ಅಧ್ಯಕ್ಷರಾದ ವಿಜಯ ನಾಯ್ಕ, ಕಾರವಾರ ಕಾರ್ಯದರ್ಶಿಯವರಾದ ನಾಗರಾಜ್ ವೆಂಕಟಾಪುರ್ ದೇವದುರ್ಗ

ಎರಡು ಲಕ್ಷ ರೂಪಾಯಿ ಹಾಗೂ ರಬಕವಿಯ ವಿತರಕರಾದ ಸೋಮಶೇಖರ ಕೊಟ್ರೇಶೆಟ್ಟಿ ಯವರು ಎರಡು ಲಕ್ಷ ರೂಪಾಯಿಗಳನ್ನು ಎಲ್‍ಐಸಿ ಪಾಲಿಸಿ ರೂಪದಲ್ಲಿ ಧನ ಸಹಾಯ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಅಧಿಕಾರಿ ಶಾಶ್ವತ ಶರ್ಮಾ, ಧಾರವಾಡ ವಿಭಾಗದ ಅಧಿಕಾರಿ ಬಿಫಿನ್ ಫನಾರ್ಂಡಿಸ್ ಮಾತನಾಡಿ ಸ್ವಚ್ಛತೆ ಮತ್ತು ಸುರಕ್ಷಿತವಾಗಿರಿ ಎಂದು ಸಿಬ್ಬಂದಿ ವರ್ಗಕ್ಕೆ ಕಿವಿಮಾತು ಹೇಳಿದರು.

  ಕಾರ್ಯಕ್ರಮಕ್ಕೆ ಸಮೀಪದ ಜಮಖಂಡಿ, ಮುಧೋಳ, ಬಾದಾಮಿ, ಕಾರವಾರ, ದೇವದುರ್ಗ ದಿಂದ ವಿತರಕರು ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ಭಾರತ್ ಗ್ಯಾಸ್ ಸರ್ವಿಸ್ ಸೆಂಟರ್ ಮಾಲೀಕರಾದ ಸೋಮಶೇಖರ ಕೊಟ್ರಶೆಟ್ಟಿ  ಸಿಬ್ಬಂದಿ ಸಂಗಮೇಶ ಗುಣಕಿ ಇದ್ದರು.