ಕೊರೊನಾ ತೊಲಗಲಿ, ಶಾಲೆಗಳು ಬೇಗ ಪ್ರಾರಂಭವಾಗಲಿ
ರಬಕವಿ-ಬನಹಟ್ಟಿ,ಅ30; ಸರಸ್ವತಿ ಮಂದಿರಗಳಿಗೆ ಬೀಗ ಬಿದ್ದು ಬಿಕೋ ಎನ್ನುತ್ತಿವೆ ಆದ್ದರಿಂದ ಕೊರೊನಾ ಮಹಾಮಾರಿ ರೋಗ ತೊಲಗಿ ಶಾಲೆಗಳು ಬೇಗ ಪ್ರಾರಂಭವಾಗಲಿ ಎಂದು ಸರಸ್ವತಿಯಲ್ಲಿ ಅರಿಕೆ ಮಾಡಿಕೊಳ್ಳುವೆ ಎಂದು ರಬಕವಿ ಬಸವ ಎಜ್ಯುಕೇಶನ್ ಪೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ ಗಿರೀಶ ಮುತ್ತೂರ ತಿಳಿಸಿದರು.
ಶುಕ್ರವಾರ ರಬಕವಿ ಬಸವ ಎಜ್ಯುಕೇಶನ್ ಪೌಂಢೇೀಶನ್ ಆವರಣದಲ್ಲಿರುವ ಸರಸ್ವತಿ ದೇವಿಗೆ ಹಾಗೂ ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದ ಅವರು. ಶಾಲೆಗಳು ಆರಂಭವಾಗದೆ ಬೀಕೋ ಎನ್ನುತ್ತಿವೆ ಅವುಗಳಿಗೆ ಜೀವ ತುಂಬಲು ಜೀವಾತ್ಮಗಳಾದ ಮಕ್ಕಳು ಶಾಲೆಗೆ ಬರುವಂತೆ ಮತ್ತು ಕೊರೊನಾ ಬೇಗ ದೇಶಬಿಟ್ಟು ತೊಲಗಲಿ ಎಂದು ತಾಯಿ ಸರಸ್ವತಿಗೆ ಪೂಜೆ ಸಲ್ಲಿಸಲಾಯಿತು ಎಂದು ಅವರು ತಿಳಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಎಂ. ಬಿ. ನಾಶಿ ಯವರು ಸರಸ್ವತಿ ದೇವಿ ಮೂರ್ತಿಗೆ ಅಭಿಷೇಕ. ಹೂ, ಹಾರಗಳಿಂದ ಅಲಂಕರಿಸಿ ಮಾತನಾಡಿ, ಮಕ್ಕಳು ಮನೆಯಲ್ಲಿ ಆನ್‍ಲಾಯ್ನ್ ಮೂಲಕ ಓದುವುದು ಅಷ್ಟು ಸೂಕ್ತವಾಗುವುದಿಲ್ಲ. ಶಿಕ್ಷಕರ ಎದುರಿಗೇ ಪಾಠ ಖಲಿತರೆ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ಕರೊನಾ ಮಹಾಮಾರಿ ವೈರಸ್ ದೀಪಾವಳಿ ಬರುವಷ್ಟರಲ್ಲಿ ತೊಲಗಲಿ ಎಂದು ದೇವಿಯಲ್ಲಿ ಅರಿಕೆ ಮಾಡಿಕೊಂಡೆವು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಮಂಡಳಿ ಸರ್ವ ಸದಸ್ಯರು, ಶಿಕ್ಷಕರು, ಹಿರಿಯರು ಇದ್ದರು.

Social Plugin