ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಾ. ದಡ್ಡೇನ್ನವರ
ರಬಕವಿ-ಬನಹಟ್ಟಿ,ಅ30: ಬಿಡಿಸಿಸಿ ಬ್ಯಾಂಕ್‍ನ ನೇಕಾರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಧಿಕೃತ ಅಭ್ಯರ್ಥಿಯನ್ನಾಗಿ ಡಾ. ಎಂ.ಎಸ್. ದಡ್ಡೇನ್ನವರ ಅವರನ್ನು ಅಧಿಕೃತವಾಗಿ ಕಣಕ್ಕಿಳಿಸಿದ್ದು ನೇಕಾರ ಸಮುದಾಯಕ್ಕೆ ಹೆಮ್ಮೆ ತರುವಂಥದ್ದು ಎಂದು ಕಾಂಗ್ರೆಸ್ ಮುಖಂಡ ಶಂಕರ ಸೊರಗಾಂವಿ ಹೇಳಿದರು.
ಸ್ಥಳೀಯವಾಗಿ ನಡೆದ ಸಭೆಯಲ್ಲಿ ಮಾತನಾಡಿ ಅವರು, ಒಕ್ಕೊರಲಿನಿಂದ ಸೇವೆ ನಡೆಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಜಾತಿ, ಮತ, ಪಂಥ ಮೀರಿದ ಮನವೀಯ ಕಳಕಳಿ ಹೊಂದಿರುವ ಡಾ. ದಡ್ಢೇನವರ ಆಯ್ಕೆಗೆ ಮತ್ತೊಮ್ಮೆ ಶ್ರಮಿಸುವ ಮೂಲಕ ಗೆಲುವಿಗೆ ಎಲ್ಲ ನೇಕಾರರ ಸಹಕಾರಿ ಸಂಘಗಳು ಹಾತೊರೆಯುತ್ತಿವೆ ಎಂದರು.
ಶಿಕ್ಷಣ, ನೇಕಾರ ಆರ್ಥಿಕತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ನೇಕಾರರಿಗೆ ಶೇ.1 ಹಾಗು 3 ಬಡ್ಡಿ ದರದ ಆಕರಣೆಯಲ್ಲಿ ಬಿಡಿಸಿಸಿ ಬ್ಯಾಂಕ್ ಮೂಲಕ ಸಾಲ ವಿತರಣೆಗೆ ನೇಕಾರರಿಗೆ ಜೀವಾಳವಾಗಿ ಕಾರ್ಯ ಸಲ್ಲಿಸಿದ್ದಾರೆಂದು ಸೊರಗಾಂವಿ ಹೇಳಿದರು.
ಇದೇ ಸಂದರ್ಭ ಶಂಕರ ಜಾಲಿಗಿಡದ, ರಾಜು ಭದ್ರನ್ನವರ, ಗಂಗಪ್ಪ ಮಂಟೂರ, ರವೀಂದ್ರ ಬಾಡಗಿ ಸೇರಿದಂತೆ ಅನೇಕರಿದ್ದರು.

Social Plugin