ರಬಕವಿ-ಬನಹಟ್ಟಿ ನಗರಸಭೆ
ರಬಕವಿ-ಬನಹಟ್ಟಿ ನಗರಸಭೆಗೆ ನ.9 ರಂದು ಚುನಾವಣೆ
*ಅಧ್ಯಕ್ಷ ಸ್ಥಾನಕ್ಕೆ ನಾಲ್ಕೂ ಪಟ್ಟಣಗಳಿಂದ ಪೈಪೋಟಿ
ರಬಕವಿ-ಬನಹಟ್ಟಿ,ಅ30: ಸ್ಥಳೀಯ ನಗರಸಭೆಯ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ನ.9 ರಂದು ಚುನಾವಣೆ ನಿಗದಿಪಡಿಸಿ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳ್ಳಿ ಆದೇಶ ಹೊರಡಿಸಿದ್ದಾರೆ.
ನಗರಸಭೆ ಸಭಾಭವನದಲ್ಲಿ ಚುನಾವಣೆಯ ನಡೆಯಲಿದೆ. ನವೆಂಬರ್ 9 ರಂದು ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರಗಳನ್ನು ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಗುತ್ತಿದ್ದಂತೆಯೇ ಪರಿಶೀಲನೆ ಮಾಡಲಾಗುವದು.
ನಾಮನಿರ್ದೇಶನ ಹಿಂತೆಗೆದುಕೊಳ್ಳಲು ನಿಗದಿಪಡಿಸಿದ ಅವಧಿ ಮುಕ್ತಾಯವಾದ ನಂತರ ಚುನಾವಣೆ ನಡೆಸಬೇಕಾದಲ್ಲಿ ಕೋರಂ ಗಣನೆಗೆ ತೆಗೆದುಕೊಂಡು ರಬಕವಿ-ಬನಹಟ್ಟಿ ನಗರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷ ಚುನಾವಣೆಗೆ ಕೈ ಎತ್ತುವ ಮೂಲಕ ಮತದಾನ ನಡೆಸಲಾಗುವದು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳ್ಳಿ ಕಾರ್ಯನಿರ್ವಹಿಸಲಿದ್ದಾರೆ.