ರಬಕವಿ-ಬನಹಟ್ಟಿ ಸಮೀಪದ ರಾಮಪುರ ಹತ್ತಿರದ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿಯ ಅಪಾರ ಪ್ರಮಾಣದ ಹೊಂಡಗಳಿಂದ ತುಂಬಿರುವುದು.

ನೇಕಾರ ನಗರಿಯಲ್ಲಿ ಮಲೆನಾಡಿನ ಅನುಭವ
ಹದಗೆಟ್ವ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ: ವಾಹನ ಸವಾರರಿಗೆ ತೊಂದರೆ
ರಬಕವಿ-ಬನಹಟ್ಟಿ,ಅ14: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತಾಲೂಕಿನಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಆವಾಂತರಗಳನ್ನೇ ಸೃಷ್ಟಿಸುವಲ್ಲಿ ಕಾರಣವಾಗಿದೆ. 
ಮನೆಯಿಂದ ಹೊರಬಾರದ ಜನತೆ ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ಮತ್ತು ಮಹಾಲಿಂಗಪುರ ರಸ್ತೆಯ ತುಂಬ ಹೊಂಡಗಳು ನಿರ್ಮಾಣವಾಗಿವೆ.
ರಾಮಪುರದ ಹತ್ತಿರದ ತಿರುವು ರಸ್ತೆಯಲ್ಲಿ ಅರ್ಧ ಅಡಿಯಷ್ಟು ಹೊಂಡಗಳು ನಿರ್ಮಾಣವಾಗಿವೆ. ಮಳೆಯಿಂದಾಗಿ ಈ ಹೊಂಡಗಳಲ್ಲಿ ನೀರು ಸಂಗ್ರಹಗೊಳ್ಳುವುದರಿಂದ ವಾಹನ ಸಂಚಾರರಿಗೆ ಬಹಳಷ್ಟು ತೊಂದರೆಯಾಗಿದೆ.
ಅದೇ ರೀತಿಯಾಗಿ ಮಹಾಲಿಂಗಪುರಕ್ಕೆ ಹೋಗುವ ರಸ್ತೆಯ ಮೇಲೂ ಅಪಾರ ಪ್ರಮಾಣದ ತೆಗ್ಗುಗಳು ನಿರ್ಮಾಣಗೊಂಡಿವೆ. 
ದಿನನಿತ್ಯ ಗೋಕಾಕ, ಬೆಳಗಾವಿ, ಬಾಗಲಕೋಟೆ, ರಾಯಚೂರ, ಮಿರಜ, ಕೊಲ್ಲಾಪುರ, ಪುಣೆ ಹಾಗೂ ಮಹಾರಾಷ್ಟ್ರದ ಇನ್ನೀತರ ನಗರ ಪ್ರದೇಶಗಳಿಗೆ ಸಂಚರಿಸುವ ವಾಹನಗಳು ಇದೇ ಮಾರ್ಗದ ಮೂಲಕ ಸಾಗುತ್ತವೆ. ಈಗ ರಸ್ತೆಯ ಮೇಲೆ ಹೊಂಡಗಳು ನಿರ್ಮಾಣವಾಗಿರುವುರಿಂದ ಬಹಳಷ್ಟು ತೊಂದರೆಯಾಗಿದೆ. ಅದರಲ್ಲೂ ರಾತ್ರಿ ಸಮಯದಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಮತ್ತು ದ್ವಿಚಕ್ರ ವಾಹನ ಚಾಲಕರಂತೂ ಗೋಳಾಡುತ್ತಿದ್ದಾರೆ.
ಅದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ನೀಡಿ ಈ ತೆಗ್ಗುಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.