ಪುರಸಭೆ ಸದಸ್ಯೆ ರೂಪಾ ಶಂಕರ ಕುಂಬಾರ 

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ

ತೇರದಾಳ : ಪುರಸಭೆಗೆ ಚುನಾವಣೆ ನಡೆದು ಎರಡು ವರ್ಷ ಕಳೆದ ಮೇಲೆ ಪುರಸಭೆಗೆ ಅಧ್ಯಕ್ಷರ ಆಯ್ಕೆಗೆ ಸರಕಾರ ಹಸಿರು ನಿಶಾನೆ ತೋರಿಸುತ್ತಿದ್ದಂತೆ ಪುರಸಭೆ ಅಧ್ಯಕ್ಷರ ಆಯ್ಕೆಗೆ ಬಾರಿ ಪೈಪೋಟಿ ನಡೆದಿದೆ. ವಾರ್ಡ ನಂ.1 ಚುನಾಯಿತ ಪ್ರತಿನಿಧಿ ರೂಪಾ ಕುಂಬಾರ ನಾನು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

  ನಾವು ಚುನಾಯಿತವಾಗಿ ಎರಡು ವರ್ಷಗಳಾದವು ಅಲ್ಲಿಂದ ಇಲ್ಲಿಯವರೆಗೆ ನಮಗೆ ಅಧಿಕಾರ ಅವಧಿ ಇರಲಿಲ್ಲ. ನನಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಶಾಸಕರು, ಸಂಸದರು ಹಾಗೂ ಪಕ್ಷದ ಹಿರಿಯರು ಹಾಗೂ ಭಾಜಪ ಪಕ್ಷದ ಚುನಾಯಿತ ಪ್ರತಿನಿಧಿಗಳ ಇವರ ಮಾರ್ಗದರ್ಶನದಲ್ಲಿ ತೇರದಾಳ ಪಟ್ಟಣದ ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. 

  ತೇರದಾಳ ಪುರಸಭೆಯು 23 ಜನ ಸದಸ್ಯರ ಸಂಖ್ಯಾ ಬಲವನ್ನು ಹೊಂದಿದೆ. ಚುನಾವಣೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 10 ಸ್ಥಾನಗಳನ್ನು ಪಡೆದುಕೊಂಡಿದೆ. ಮೂವರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಈಗಿನ ಅಧ್ಯಕ್ಷ ಉಪಾಧ್ಯಕ್ಷರ ಚುನಾವನೆಗೆ ಪಕ್ಷೇತರರು ನಿರ್ಣಾಯಕರಾಗಲಿದ್ದಾರೆ. ಆಯ್ಕೆಗೊಂಡ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಪಕ್ಷವನ್ನು ಬೆಂಬಲಿಸುವುದು ಖಚಿತವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ರೇಸ್‍ನಲ್ಲಿದ್ದವರು ರೂಪಾ ಶಂಕರ ಕುಂಬಾರ, ಕುಸುಮಾಂಡಿನಿ ಅಲ್ಲಪ್ಪ ಬಾಬಗೊಂಡ, ಅಣ್ಣಪೂರ್ಣಾ ಸದಾಶಿವ ಹೊಸಮನಿ ಹಾಗೂ ಅವಿರೋಧವಾಗಿ ಆಯ್ಕೆಗೊಂಡಿರುವ ಸಂಗೀತಾ ಕೇದಾರಿ ಪಾಟೀಲ ಮತ್ತು ಪಕ್ಷೇತರ ಸದಸ್ಯೆ, ಕಮಲವ್ವ ಭೀಮಪ್ಪ ವಡ್ಡರ,  ಶಾಂತವ್ವ ಕಾಲತಿಪ್ಪಿ ಇವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸಂತೋಷ. ಜಮಖಂಡಿ ಉಪಾಧ್ಯಕ್ಷರ ಸ್ಥಾನದ ಆಕಾಂಕ್ಷಿಯಾದ ಇವರಾಗಿದ್ದಾರೆ.

  ರೂಪಾ ಶಂಕರ ಕುಂಬಾರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಪಟ್ಟಣದ ಅಭಿವೃದ್ಧಿಗಾಗಿ ಹೆಚ್ಚಿನ ಅನಿದಾನ ತರವಲ್ಲಿ ಪ್ರಯತ್ನಿಸಲಾಗುವುದು. ನಮ್ಮ ಬಿಜೆಪಿಯಿಂದ ಆಯ್ಕೆಯಾದ ಆರು ಜನರಲ್ಲಿ ಯಾರನ್ನಾದರೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ. ಒಟ್ಟಾರೆಯಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ನಂತರ ತೇರದಾಳ ಪಟ್ಟಣವು ಅಭಿವೃದ್ಧಿಯಾಗಲಿ ಎಂಬುವುದು ನಮ್ಮೇಲ್ಲರ ಆಸೆಯಾಗಿದೆ ಎಂದು ವಾರ್ಡ ನಂ 1ರ ಸದಸ್ಯೆ ರೂಪಾ ಶಂಕರ ಕುಂಬಾರ ಪತ್ರಿಕೆಗೆ ತಿಳಿಸಿದರು.