ರಾವಳ ಸಿನಿಫೋಕಸ್‍ನಿಂದ ಕನ್ನಡ ಚಲನಚಿತ್ರ `ಉಡಾಳ’ ಹಾಗು ಹಿಂದಿ ಚಲನಚಿತ್ರ `ಶಂತಲೇ’ ಇವುಗಳ ಫೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಉದ್ಘಾಟಿಸಿದರು.
`ಉಡಾಳ’ ಚಲನಚಿತ್ರದ ಫೋಸ್ಟರ್ ಬಿಡುಗಡೆಗೊಳಿಸಲಾಯಿತು.
*ರಾವಳ ಸಿನಿಫೋಕಸ್‍ನಿಂದ `ಉಡಾಳ’ ಹಾಗು `ಶಂತಲೇ’ ಚಿತ್ರಗಳ ಫೋಸ್ಟರ್ ಬಿಡುಗಡೆ.
ರಬಕವಿ-ಬನಹಟ್ಟಿ,ಅ19:ಸರಿಯಾದ ರೀತಿಯಲ್ಲಿ ಪ್ರೋತ್ಸಾಹ, ಸಹಕಾರ, ಪುರಸ್ಕಾರ ದೊರೆಯದಿದ್ದ ಕಾರಣ ಉತ್ತರ ಕರ್ನಾಟಕ ಕಲಾವಿದರು ಬೆಳಕಿಗೆ ಬರುತ್ತಿಲ್ಲವೆಂದು ಬನಹಟ್ಟಿ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಹೇಳಿದರು.
ಹೋಟೆಲ್ ಗೋಕುಲ್‍ನ ಸಭಾಂಗಣದಲ್ಲಿ ಕನ್ನಡದ `ಉಡಾಳ’ ಹಾಗು ಹಿಂದಿ ಭಾಷೆಯ `ಶಂತಲೇ’ ಚಲನಚಿತ್ರಗಳ ಪೋಸ್ಟರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಕಷ್ಟು ಪ್ರತಿಭೆಯುಳ್ಳ ಕಲಾವಿದರು ಉತ್ತರ ಕರ್ನಾಟಕದಲ್ಲಿದ್ದು, ಬೆಂಗಳೂರು, ಹಳೆ ಮೈಸೂರು ಭಾಗದ ಕಲಾವಿದರಿಗೆ ಶರಣಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬಾಗಲಕೋಟೆ ಯುವ ಪ್ರತಿಭೆ ಕಲಾವಿದ, ನಿರ್ದೇಶಕ ಮಹೇಶ ರಾವಳ ಧೈರ್ಯದಿಂದ ಧುಮುಕಿ ತಮ್ಮ ಎರಡು ಹಾಗು ಮೂರನೇಯ ಚಲನಚಿತ್ರಗಳಾಗಿ ಕನ್ನಡ ಭಾಷೆಯ `ಉಡಾಳ’ ಹಾಗು ಹಿಂದಿ ಭಾಷೆಯ `ಶಂತಲೇ’ ಎಂಬ ಚಲನಚಿತ್ರಗಳನ್ನು ಹೊರತರುತ್ತಿರುವದು ಸಂತಸದ ವಿಷಯ. `ಉಡಾಳ’ ಚಿತ್ರದಲ್ಲಿ `ಇವ್ನು ನೀವ್ ಅಂದುಕೊಂಡಂಗಲ್ಲ’ ಎಂಬ ಸಣ್ಣ ಟೈಟಲ್ ಎಲ್ಲರನ್ನೂ ವಿಶೇಷತೆಯ ಚರ್ಚೆಗೆ ಕಾರಣವಾಗಿದ್ದು, ಅನಿವಾರ್ಯ ಸಂದರ್ಭದಲ್ಲಿ ವ್ಯಕ್ತಿ ಸಮಾಜದಲ್ಲಿ ದಾರಿ ಬಿಟ್ಟು ಮತ್ತೇ ಸರಿ ದಾರಿಗೆ ಬಂದಾಗಲೂ ಯಾವ ರೀತಿ ಜನತೆಯ ವರ್ತನೆ ಎಂಬುದನ್ನು ಚಿತ್ರ ತೋರಿಸುವಲ್ಲಿ ಪ್ರಧಾನವಾಗಿದ್ದು, ಶಂತಲೇ ಎಂಬ ಹಿಂದಿ ಚಲನಚಿತ್ರವು ಜಾಗತಿಕಮಟ್ಟದಲ್ಲಿ ತಂದೆ-ಮಗನ ಕಥೆಯನ್ನು ಮತ್ಯಾರಿಗೂ ಅರಿವಾಗದಂತೆ ಕೊನೆಯ ಹಂತದಲ್ಲಿ ಪ್ರೇಕ್ಷಕರಿಗೆ ಮಾತ್ರ ತಿಳಿಯುವಂತೆ ಸುಂದರವಾಗಿ ಕಥೆ ಹೆಣೆದು ಸಿನಿ ಅಭಿಮಾನಿಗಳಿಗೆ ವಿನೂತನ ಮನರಂಜನೆ ನೀಡುವಲ್ಲಿ ಕಾರಣವಾಗಲಿದ್ದು, ಒಟ್ಟಾರೆ ಈ ಭಾಗದಿಂದ ನಿರ್ದೇಶಕ, ನಿರ್ಮಾಪಕ, ಚಿತ್ರನಟರಾಗಿಯೂ ಸಿನಿಮಾ ರಂಗದಲ್ಲಿ ಸೇವೆ ಒದಗಿಸುತ್ತಿರುವ ಮಹೇಶ ರಾವಳ ಅವರ ಕಾರ್ಯ ಶ್ಲಾಘನೀಯವೆಂದರು.
ಚಲನಚಿತ್ರ ನಿರ್ದೇಶಕ, ನಟ ಮಹೇಶ ರಾವಳ ಮಾತನಾಡಿ, ರಾವಳ ಸಿನಿಫೋಕಸ್‍ನಿಂದ ಮೊದಲ ಚಿತ್ರ `ಚರಂತಿ’ ಯಶಸ್ವಿ ನಂತರ ಏಕಕಾಲದಲ್ಲಿ ಎರಡು ಚಲನಚಿತ್ರಗಳ ಫೋಸ್ಟರ್ ಬಿಡುಗಡೆ ನಡೆಯುತ್ತಿರುವದು ಹೆಮ್ಮೆ. ಸದ್ಯದ ಜನತೆಗೆ ಬೇಕಾಗುವಂತೆ ಚಲನಚಿತ್ರ ಅರ್ಪಿಸುವದು ನನ್ನ ಧ್ಯೇಯವಾಗಿದೆ ಎಂದರು.
ಕಡಿಮೆ ಬಜೆಟ್‍ನಲ್ಲಿಯೂ ಒಳ್ಳೆಯ ಚಿಲನಚಿತ್ರಗಳನ್ನು ಸಮಾಜಕ್ಕೆ ನೀಡಬಹುದೆಂಬುದು ನನ್ನದಾಸೆಯಾಗಿದೆ. ಎರಡೂ ಚಿತ್ರಗಳಿಗೆ ಸಂಬಂಧ ನಟ, ನಟಿಯವರ ಆಯ್ಕೆಯಲ್ಲಿ ಚಿತ್ರತಂಡವಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದೇವೆಂದರು.
ಜವಳಿ ಉದ್ಯಮಿ ಮಲ್ಲಿಕಾರ್ಜುನ ಭದ್ರನ್ನವರ, ಡಾ. ಪರಶುರಾಮ ರಾವಳ, ವಿಶ್ವನಾಥ ಸವದಿ, ನಿಜಗುಣಿ ಅಮಟಿ, ಡಾ. ನಂದಕುಮಾರ ರಾವಳ ವೇದಿಕೆ ಮೇಲಿದ್ದರು.
ರಾಜು ತಳವಾರ, ಮೋನು ಬಡಿಗೇರ, ಪರಶುರಾಮ ಭಜಂತ್ರಿ, ಶಂಕರ ಪಾಟೀಲ, ಬಾಲು ಪವಾರ, ಬಸು ಪರಾಳಮಠ, ಶಂಕರ ಕೆಸರಗೊಪ್ಪ, ತುಷಾರ ರಾವಳ, ಶಿವು ಭಜಂತ್ರಿ, ಶಿವಾಜಿ, ಪ್ರದೀಪ, ಆಕಾಶ, ಕುಮಾರಿ ಸಮೃದ್ಧಿ ರಾವಳ ಸೇರಿದಂತೆ ಅನೇಕರಿದ್ದರು.

Social Plugin