ರಬಕವಿ ಬನಹಟ್ಟಿ ನಗರಗಳ ಪ್ರಮುಖ ರಸ್ತೆಗಳಲ್ಲಿ ಕೋವಿಡ್-19 ತಡೆಗಟ್ಟಲು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಜನಜಾಗೃತಿ ಅಭಿಯಾನ ಸಂದರ್ಭದಲ್ಲಿ ನ್ಯಾಯಾಧೀಶೆ ರೇಷ್ಮಾ ಗೋಣಿ ಮಾಸ್ಕ ಹಾಗೂ ಶ್ಯಾನಿಟೈಜರ್ ವಿತರಿಸಿ ಚಾಲನೆ ನೀಡಿದರು. ದಿವಾಣಿ ನಯಾಧೀಶ ಮಹೇಶ ಚಂದ್ರಕಾಂತ ಇದ್ದರು.

ಮಾಸ್ಕ ಧರಿಸುವಂತೆ ನ್ಯಾಯಾಧೀಶರಿಂದ ಜಾಗೃತಿ ಅಭಿಯಾನ
ರಬಕವಿ-ಬನಹಟ್ಟಿ,ಅ19: ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಈ ಭಾರತ ಮಾತೆಯ ಮಡಿಲಲ್ಲಿರುವ ಎಲ್ಲರೂ ತಮ್ಮ ತಮ್ಮ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಲು ಮತ್ತು ಸರ್ಕಾರದ ಕಾನೂನುಗಳನ್ನು ಸರಿಯಾಗಿ ಪಾಲಿಸಿ ತಪ್ಪದೆ ಎಲ್ಲರೂ ಮಾಸ್ಕ ಹಾಗೂ ಸಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ರಬಕವಿ ಬನಹಟ್ಟಿ  ಹಿರಿಯ ದಿವಾಣಿ ನ್ಯಾಯಾಧೀಶೆ ರೇಷ್ಮಾ ಗೋಣಿ ತಿಳಿಸಿದರು.
ಶನಿವಾರ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಕೋವಿಡ್-19 ತಡೆಗಟ್ಟಲು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಜನಜಾಗೃತಿ ಅಭಿಯಾನ ಸಂದರ್ಭದಲ್ಲಿ ಮಾರ್ಗಗಳ ಮಧ್ಯದಲ್ಲಿ ಮಾಸ್ಕ ಇಲ್ಲದೆ ತಿರುಗಾಡುವವರಿಗೆ ಕರೊನಾ ಕುರಿತು ಅರಿವು ಮೂಡಿಸುವುದರೊಂದಿಗೆ ಮಾಸ್ಕ ಹಾಗೂ ಶ್ಯಾನಿಟೈಸ್‍ರ ವಿತರಿಸಿ ಅವರು ಮಾತನಾಡಿದರು.
ಕರೊನಾ ನಮ್ಮ ದೇಶದಿಂದ ಹೊಡೆದೋಡಿಸಲು ನಮ್ಮ ದೇಶದ ವೈಧ್ಯರು ಹರಸಹಾಸಪಡುತ್ತಿದ್ದಾರೆ. ಅಲ್ಲದ ಅನೇಕರಿಂದ ಸಂಶೋಧನೆ ಕೂಡಾ ನಡೆಯುತ್ತಿದೆ. ಆದರೆ ಇಂದು ಅದರೊಟ್ಟಿಗೆ ಬದುಕುವ ಅನಿವಾರ್ಯತೆ ಕೂಡಾ ಇರುವುದರಿಂದ ನಾವೆಲ್ಲರು ನಿಯಮಗಳನ್ನು ಪಾಲಿಸಿ ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಮುಂದುವರಿಯಬೇಕಾಗಿದೆ ಎಂದು ದಿವಾಣಿ ನ್ಯಾಯಾಧೀಶ ಮಹೇಶ ಚಂದ್ರಕಾಂತ ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘ, ತಾಲೂಕಾಡಳಿತ, ಆರೋಗ್ಯ ಇಲಾಖೆ, ಅರೆ ಕಾಲಿಕ ಕಾನೂನು ಸ್ವಯಂ ಸೇವಕರು ಹಾಗೂ ನ್ಯಾಯಾಲಯದ ಸಿಬ್ಬಂದಿ ಸೇರಿದಂತೆ ಅನೇಕರಿದ್ದರು.