ನವರಾತ್ರಿಯ ಮೂರನೇ ದಿನವಾದ ಸೋಮವಾರ ಮುಂಜಾನೆ ನಗರದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ  ಚಂದ್ರಘಂಟಾ ದೇವಿ ಪೂಜೆ ಜೀಜಾಮಾತಾ ಮಹಿಳಾ ಮಂಡಳ ಸದ್ಯಸ್ಯರ ನೇತೃತ್ವದಲ್ಲಿ ನಡೆಯಿತು. 

ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಪೂಜೆ 
ರಬಕವಿ-ಬನಹಟ್ಟಿ,ಅ19: ನವರಾತ್ರಿಯ ಎರಡನೇ ದಿನವಾದ ಸೋಮವಾರ ಮುಂಜಾನೆÉ ನಗರದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ  ಚಂದ್ರಘಂಟಾ ದೇವಿ ಪೂಜೆಯನ್ನು ಜೀಜಾಮಾತಾ ಮಹಿಳಾ ಮಂಡಳ ಸದಸ್ಯರು ಹಮ್ಮಿಕೊಂಡಿದ್ದರು. 
ಈ ದಿನ ತಾಯಿ ದುರ್ಗೆಯನ್ನು ಚಂದ್ರಘಂಟಾ ನಾಮದಿಂದ ಪೂಜಿಸುತ್ತಾರೆ ನವರಾತ್ರೋತ್ಸವದ ಉಪಾಸನೆಯಲ್ಲಿ ಮೂರನೆಯ ದಿನದ ಪೂಜೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ದಿನ ಈ ದೇವಿಯದ್ದೇ ಮೂರ್ತಿಯ ಪೂಜಾರಾಧನೆ ಮಾಡಲಾಗುತ್ತದೆ 
ರವಿವಾರ ರಾತ್ರಿ ನವರಾತ್ರಿ ನಿಮಿತ್ತ ಗೋಂದಳಿ ಕಾರ್ಯಕ್ರಮ ಜರುಗಿತು. ಕುಮಾರ ಕದಂ, ವಿಜಯ ಮಾಣೆ, ಬಾಳು ಕದಂ, ಗೋವಿಂದ ಗಾಯಕವಾಡ, ಶಿವಾನಂದ ಗಾಯಕವಾಡ, ಶ್ರೀಕಾಂತ ಗಾಯಕವಾಡ, ಶಿವಾಜಿ ಮಾಳಿ, ಸಂಜಯ ಸಿಂಧೆ, ಶಿವಾಜಿ ಪಾರ್ಕೆ, ಹಾಗೂ ಜೀಜಾಮಾತಾ ಮಹಿಳಾ ಮಂಡಳ ಸದಸ್ಯರು ಉಪಸ್ಥಿತರಿದ್ದರು.