ಬೇಲೂರು ರಘುನಂದನ್ ಅವರಿಗೆ ಡಾಕ್ಟರೇಟ್ ಪದವಿ 

ರಬಕವಿ-ಬನಹಟ್ಟಿ,ಅ5: ಕವಿ ಹಾಗೂ ನಾಟಕಕಾರ  ಡಾ. ರಘುನಂದನ್. ಬಿ.ಆರ್(ಬೇಲೂರು ರಘುನಂದನ್) ಇವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿಯು " ಕನ್ನಡ ರಂಗಭೂಮಿ ಮತ್ತು ಸಿನಿಮಾ: ವ್ಯಕ್ತಿನೆಲೆಯ ತಾತ್ವಿಕ ಚಿಂತನೆಗಳು".  ಚಿತ್ರನಟಿ ಹಾಗೂ ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ ಉಮಾಶ್ರೀಯವರನ್ನು ಅನುಲಕ್ಷಿಸಿ  ಡಾ.ಬಿ.ಎಂ. ಪುಟ್ಟಯ್ಯ, ಇವರ ಮಾರ್ಗ ದರ್ಶನದಲ್ಲಿ ಮಂಡಿಸಿದ ಸಂಶೋದನಾ ಪ್ರೌಢ ಪ್ರಬಂಧಕ್ಕೆ  ಪಿ. ಎಚ್. ಡಿ ಪದವಿಯನ್ನು ನೀಡಿದೆ. ಅವರಿಗೆ ಬನಹಟ್ಟಿಯ ಗೆಳೆಯರ ಬಳಗದವರು ಹಾಗೂ ಸಾಹಿತಿ ಬಳಗದವರು ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.