ಬನಹಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನ ಮುಂಭಾಗ ಬೃಹತ್ ಚರಂಡಿ ಕಾಮಗಾರಿ ಸಂದರ್ಭ ಅವಘಡವಾಗಿದ್ದನ್ನು ಪೌರಾಯುಕ್ತ ಶ್ರೀನಿವಾಸ ಜಾಧವ ಪರಿಶೀಲಿಸಿದರು.
ಕಾಮಗಾರಿ ಸಂದರ್ಭ ಅವಘಡ: ತಪ್ಪಿದ ಅನಾಹುತ
ರಬಕವಿ-ಬನಹಟ್ಟಿ,ಅ21: ನಗರದ ಕಾಡಸಿದ್ದೇಶ್ವರ ದೇವಸ್ಥಾನ ಆವರಣ ಮುಂಭಾಗದಲ್ಲಿ ನಗರಸಭೆ ಅಧೀನದಲ್ಲಿ ಸುಮಾರು 83 ಲಕ್ಷ ರೂ.ಗಳ ಮಹತ್ವವಾಗಿ ಹಳ್ಳಕ್ಕೆ ಸೇರುವ ದೊಡ್ಡ ಚರಂಡಿ ಎರಡೂ ಬದಿಗೆ ಸಿಸಿ ಹಾಕುವ ಸಂದರ್ಭ ನೀರಿನಿಂದ ತುಂಬಿದ್ದ ಟ್ರ್ಯಾಕ್ಟರ್ ಟ್ಯಾಂಕರ್ ಕುಸಿದು ಬಿದ್ದ ಪರಿಣಾಮ ಕಾಮಗಾರಿ ನಾಶವಾದ ಘಟನೆ ಬುಧವಾರ ನಡೆದಿದೆ.
ಟ್ಯಾಂಕರ್ ಮೂಲಕ ನೀರು ಹಾಕುವ ಸಲುವಾಗಿ ನಿಲ್ಲಿಸಲಾಗಿದ್ದು, ಭಾರಿ ಮಳೆಗೆ ಮಣ್ಣು ಕುಸಿದ ಪರಿಣಾಮ ಇಡೀ ಟ್ರ್ಯಾಕ್ಟರ್ ಸಮೇತ ಅಪಾರ ಪ್ರಮಾಣದಲ್ಲಿ ಹರಿಯುತ್ತಿದ್ದ ಬೃಹತ್ ಚರಂಡಿಯ ಕಾಮಗಾರಿ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆ ನಡೆದ ಕೆಲ ಹೊತ್ತು ನಂತರ ಆಗಮಿಸಿದ ಪೌರಾಯುಕ್ತ ಶ್ರೀನಿವಾಸ ಜಾಧವ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಶರಣಪ್ಪನವರ ಪರಿಶೀಲನೆ ನಡೆಸಿ, ಕಾಮಗಾರಿ ಬಗ್ಗೆ ಗುತ್ತಿಗೆದಾರನಿಗೆ ಮರು ಕಾರ್ಯ ನಡೆಸುವಂತೆ ಸೂಚಿಸಿದರು.
ಹೆಸ್ಕಾಂ ವಿರುದ್ಧ ಗ್ರಾಹಕರು ಗರಂ: ರಬಕವಿ-ಬನಹಟ್ಟಿ ಅವಳಿ ನಗರಾದ್ಯಂತ ಹಳೆಯ ಮೀಟರ್‍ಗಳನ್ನು ತೆಗೆದು ಹೊಸ ಮೀಟರ್ ಅಳವಡಿಕೆಯಲ್ಲಿ ಗುತ್ತಿಗೆದಾರರು ಪ್ರತಿ ಗ್ರಾಹಕನಿಂದ 50 ರಿಂದ 100 ರೂ. ಹಣ ಪಡೆಯುತ್ತಿದ್ದಾರೆಂದು ಸ್ಥಳೀಯ ಗ್ರಾಹಕರು ಆರೋಪಿಸಿದ್ದಾರೆ.
ನಗರಸಭಾ ಸದಸ್ಯ ಸಂಜಯ ತೆಗ್ಗಿ ಹಾಗು ಯಲ್ಲಪ್ಪ ಕಟಗಿ ಮಾತನಾಡಿ, ಉಚಿತವಾಗಿ ಅಳವಡಿಕೆ ಯೋಜನೆಯಾಗಿದ್ದು, ವಿನಾಕಾರಣ ಗುತ್ತಿಗೆದಾರರು ಅಮಾಯಕವಾಗಿ ನೇಕಾರರಿಂದ ಹಣ ವಸೂಲಿಗಿಳಿದಿದ್ದಾರೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು, ಗ್ರಾಹಕರಿಗೆ ಹಣ ಮರಳಿಸುವ ಜೊತೆಗೆ ಇನ್ನುಳಿದ ಮನೆಗಳಿಗೆ ಉಚಿತವಾಗಿ ಹೊಸ ಮೀಟರ್ ಅಳವಡಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Social Plugin