ರಬಕವಿ ಡಾ. ಪದ್ಮಜೀತ ನಾಡಗೌಡಪಾಟೀಲ ದಂಪತಿಗಳು ತಮ್ಮ ಆಸ್ಪತ್ರೆಯಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಪಾದಪೂಜೆಯನ್ನು ನೆರವೇರಿಸಿದರು. ಶಿವಾನಂದ ದಾಶಾಳ ಸೇರಿದಂತೆ ಅನೇಕರಿದ್ದರು.
ಇಂದಿನ ನಾಗಾಲೋಟದ ಬದುಕಿಗೆ ಆಧ್ಯಾತ್ಮದ ಅರಿವು ಮುಖ್ಯ; ಶ್ರೀಶೈಲ ಜಗದ್ಗುರು
ರಬಕವಿ-ಬನಹಟ್ಟಿ,ಸೆ4: ಇಂದಿನ ದೈನಂದಿನ ನಾಗಾಲೋಟದ ಬದುಕಿಗೆ ಆಧ್ಯಾತ್ಮದ ಅರಿವು ಭಹು ಮುಖ್ಯಾವಾಗಿ ಬೇಕಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಗುರುವಾರ ರಬಕವಿ ನಗರದ ಡಾ. ಪದ್ಮಜೀತ ನಾಡಗೌಡಪಾಟೀಲರ ತ್ರಿಶಲಾದೇವಿ ನೇತ್ರ ತಪಾಸಣಾ ಆಸ್ಪತ್ರೆಯಲ್ಲಿ ಪಾದಪೂಜೆ ನಂತರ ಅವರು ಮಾತನಾಡಿದರು. ಮಾನವರು ಆರೋಗ್ಯವಾಗಿ ಬದುಕಲು ಆಧ್ಯಾತ್ಮದತ್ತ ಒಂದಿಷ್ಟು ಒಲವು ತೋರಿದಲ್ಲಿ ಸುಂದರ ಬದುಕು ಸಾಗಿಸಬಹುದು. ರೈತರು ಸಹ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಕೃಷಿಯತ್ತ ಗಮನ ಹರಿಸಬೇಕು. ಪರಿಸರ ಹಾಳು ಮಾಡುವಂತಹ ವಿಷಕಾರಿಕ ಔಷಧಿಗಳನ್ನು ಬಳಸಿ ಭೂಮಿಯ ಒಡಲನ್ನು ಹಾಳುಮಾಡಬೇಡಿ ಎಂದರು.
ಇಂದಿನ ಮಹಾಮಾರಿ ಕೊರೊನಾ ರೋಗಕ್ಕೆ ಯಾರೂ ಹೆದರಬೇಡಿ, ಮುಂಬರುವ ದಿನಗಳಲ್ಲಿ ಅದರ ಜೊತೆಗೆ ಬದುಕು ಸಾಗಿಸಬೇಕಾದ ಅನಿವಾರ್ಯತೆ ಇದೆ. ಉತ್ತಮ ಆಹಾರ, ಹೆಚ್ಚಾಗಿ ಹಸಿ ತಪ್ಪಲು, ನೆನೆಸಿಟ್ಟ ಕಾಳು, ಬಿಸಿ ನೀರು ಹಾಗೂ ಬೀಸಿ ತಿಂಡಿ ತಿನ್ನುವುದು ಸೂಕ್ತ. ಪರಿಸರದ ವಿರುದ್ದ ಬದುಕು ಸಾಗಿಸುವ ಪ್ರಯತ್ನ ಮಾಡಬೇಡಿ, ಸ್ವಚ್ಚತೆಗೆ ಹೆಚ್ಚು ಆಧ್ಯತೆ ಕೊಡುವುದರೊಂದಿಗೆ ತಂದೆ ತಾಯಿಗಳಿದ್ದವರು ಅವರ ಜೀವಿತಾವಧಿ ಇರುವವರೆಗೂ ಅವರ ಸೇವೆ ಮಾಡುವುದ ನಿಜವಾದ ಶಿವ ಪಾರ್ವತಿಯರ ಸೇವೆ ಮಾಡಿದಷ್ಟೆ ಸಮವಾಗುತ್ತದೆ ಎಂದು ಇಂದಿನ ಯುವಪಿಳಿಗೆ ಶ್ರೀಗಳು ಕಿವಿ ಮಾತು ಹೇಳಿದರು.
ಈ ಜೀವನ ಬರುವಾಗ ಖಾಲಿ, ಹೋಗುವಾಗ ಖಾಲಿ ಇರುವಷ್ಟು ದಿನ ಈ ಸಮಾಜದ ಸೇವೆಯನ್ನು ಮಾಡಿ ಏನಾದರೂ ಈ ಸಮಾಜಕ್ಕೆ ಕೊಡುಗೆ ಕೊಟ್ಟು ಹೋದರೆ ಸಮಾಜ ನಿಮ್ಮನ್ನು ಭಹುಕಾಲ ನೆನೆಪಿಸುತ್ತದೆ. ದಾನ, ಧರ್ಮ, ಬಡವರ ಸೇವೆ, ಒಂದಿಷ್ಟು ಅನ್ನ ದಾನ ಹೀಗೆ ಕೈಲಾದಷ್ಟು ಸೇವೆ ಮಾಡಿದರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಾಡಗೌಡಪಾಟೀಲರ ಸೇವೆ ಅನನ್ಯ, ಅವರ ಬಡವರ ಸೇವೆ ಹೀಗೆ ಮುಂದುವರಿಯಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಡಾ. ಪದ್ಮಜೀತ ನಾಡಗೌಡಪಾಟೀಲ ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು. ಮುತ್ತುಸ್ವಾಮಿ ಹಿರೇಮಠ, ಮಹಾದೇವ ದುಪದಾಳ, ಜಿನ್ನಪ್ಪ ಪಡ್ನಾಡ, ಸಂಜಯ ಅಮ್ಮಣಗಿಮಠ. ಶಿವಾನಂದ ದಾಶಾಳ ಸೇರಿದಂತೆ ಅನೇಕರಿದ್ದರು.
Social Plugin