ರಬಕವಿ-ಬನಹಟ್ಟಿ ನಗರಸಭೆಯ ಸಭಾಭವನದಲ್ಲಿ ಹಮ್ಮಿಕೊಂಡ ವೀರರಾಣಿ ಕಿತ್ತೂರು ಚೆನ್ನಮ್ಮ 242ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪೌರಾಯುಕ್ತ ಶ್ರೀನಿವಾಸ ಜಾಧವ
ಚೆನ್ನಮ್ಮ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಮಾದರಿಯಾಗಿದ್ದಾಳೆ
ರಬಕವಿ-ಬನಹಟ್ಟಿ,ಅ23: ಸ್ವಾತಂತ್ರ್ಯ ರಕ್ಷಣೆಯ ಸಲುವಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಅಮರಳಾದ ಚೆನ್ನಮ್ಮ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಮಾದರಿಯಾಗಿದ್ದಾಳೆ ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ಹೇಳಿದರು.
ಅವರು ಶುಕ್ರವಾರ ನಗರಸಭೆಯ ಸಭಾಭವನದಲ್ಲಿ ಹಮ್ಮಿಕೊಂಡ ವೀರರಾಣಿ ಕಿತ್ತೂರು ಚೆನ್ನಮ್ಮ 242ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ರಾಣಿ ಚೆನ್ನಮ್ಮ ಕನ್ನಡಿಗರ ಪೌರುಷ, ಸಾಹಸ, ಸ್ವಾಭಿಮಾನವನ್ನು ಹೋರಾಟದ ಮೂಲಕ ತೋರ್ಪಡಿಸಿದರು. ನಾಡಿನ ಜನರನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಹುರಿದುಂಬಿಸಿದ ಧೀರ ಮಹಿಳೆ. ಒಬ್ಬ ಮಹಿಳೆಯಾಗಿ ನಾಡಿನ ಜನರ ರಕ್ಷಣೆಗೆ, ಕನ್ನಡ ನಾಡಿನ ಉಳಿವಿಗೆ ಪ್ರಾಣವನ್ನೆ ಒತ್ತೆ ಇಟ್ಟ ವೀರಮಾತೆ. ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ನಡೆಸಿದ ಹೋರಾಟಕ್ಕೆ ಉತ್ತಮ ಬೆಂಬಲ ದೊರಕಿದ್ದರೆ ಬ್ರಿಟಿಷರನ್ನು ದೇಶಬಿಟ್ಟು ಓಡಿಸಲು 1947ರವರೆಗೆ ಕಾಯಬೇಕಿರಲಿಲ್ಲ. ಆದರೆ, ನಮ್ಮವರೇ ಮಾಡಿದ ಕುತಂತ್ರದ ಫಲವಾಗಿ ಮೋಸ, ವಂಚನೆಯಿಂದ ಬ್ರಿಟಿಷರ ದಾಳಿಗೆ ಚೆನ್ನಮ್ಮ ಬಲಿಯಾಗಬೇಕಾಯಿತು ಎಂದರು.
ಈ ಸಂದರ್ಭದಲ್ಲಿ ಕಛೇರಿ ವ್ಯವಸ್ಥಾಪಕರಾದ ಬಿ. ಎಂ. ಡಾಂಗೆ, ಅಭಿಯಂತರರಾದ ಬಸವರಾಜ ಶರಣಪ್ಪನವರ, ಸಿಕದಂದರ ಕಲಬುರ್ಗಿ, ಸುರೇಶ ಪರಕಾಳೆ, ಮುಖೇಶ ಬನಹಟ್ಟಿ, ಅಶೋಕ ಗುಡಿಮನಿ, ಸಂಗೀತಾ ಕೋಳಿ, ಪಿ. ಜಿ. ಕಾಖಂಡಕಿ, ರವಿ ಕೊರ್ತಿ, ಅಭಿನಂದನ ಸೋನಾರ, ರಮೇಶ ಮಳ್ಳಿ, ರಾಜಕುಮಾರ ಹೊಸೂರ, ಸದಾಶಿವ ಉಂಕಿ, ಉಮೇಶ ಹೊಸಮನಿ ಸೇರಿದಂತೆ ಅನೇಕರು ಇದ್ದರು.

Social Plugin