ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಮಪೂರದ ಎಸ್‍ಸಿ ಕಾಲೋನಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದ ಶಾಸಕ ಸಿದ್ದು ಸವದಿ
ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ - ಸವದಿ
ರಬಕವಿ-ಬನಹಟ್ಟಿ,ಅ19: ತೇರದಾಳ ಮತಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕರು, ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ಅವರು ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಮಪೂರದ ಎಸ್‍ಸಿ ಕಾಲೋನಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ 2019-20ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿಯಲ್ಲಿ ರಾಮಪುರದ ಎಸ್‍ಸಿ ಕಾಲೋನಿಯಲ್ಲಿ 12 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗನೆ ಹಾಗೂ ಉತ್ತಮ ಗುಣಮಟ್ಟದಿಂದ ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ 29 ವಾರ್ಡನ ಸದಸ್ಯರಾದ ವಿಜಯ ಕಲಾಲ, ಶ್ರೀಶೈಲ ಆಲಗೂರ, ಸುನೀಲ ವಜ್ರಮಟ್ಟಿ, ಮಾರುತಿ ಸಿಂಗನ, ಸಚೀನ ಕಾಟಕರ, ರವಿ ಕೋರ್ತಿ, ಜೀತ್ರೆಂದ್ರ ದೇಸಾಯಿ, ವೈಷ್ಣವಿ ಬಾಗೇವಾಡಿ, ಕಲ್ಲಪ್ಪ ಆಲಗೂರ, ಪ್ರಕಾಶ ಸಿಂಗನ, ಸಚೀನ ಗೋಲಬಾವಿ ಸೇರಿದಂತೆ ರಾಮಪುರದ ಅನೇಕ ಬಿಜೆಪಿಯ ಮುಖಂಡರು ಇದ್ದರು.

Social Plugin