ರಬಕವಿಯಲ್ಲಿ ಮಾಜಿ ಶಾಸಕಿ ಉಮಾಶ್ರೀ ಕೆಪಿಸಿಸಿ ರಾಜ್ಯ ವಕ್ತಾರರಾಗಿ ನೇಮಕವಾದ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಎಸ್‍ಸಿ ಘಟಕದವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿದರು.
ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ - ಉಮಾಶ್ರೀ
ರಬಕವಿ-ಬನಹಟ್ಟಿ,ಅ11: ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಶಾಸಕಿ, ಸಚಿವೆ ಹಾಗೂ ಕೆಪಿಸಿಸಿ ರಾಜ್ಯ ವಕ್ತಾರರಾಗಿರುವ ಉಮಾಶ್ರೀ ಹೇಳಿದರು.
ಅವರು ರಬಕವಿಯ ಅವರ ನಿವಾಸದಲ್ಲಿ ಕೆಪಿಸಿಸಿ ರಾಜ್ಯ ವಕ್ತಾರರಾಗಿ ನೇಮಕವಾದ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್‍ನ ಎಸ್‍ಸಿ ಘಟಕದವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜೊತೆಗೆ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೋಮ್ಮೆ ಅಧಿಕಾರಕ್ಕೆ ಬರುವಂತೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀಯವರನ್ನು ಸನ್ಮಾನಿಸಿ ಕಾಂಗ್ರೆಸ್ ಪಕ್ಷದ ಎಸ್‍ಸಿ ವಿಭಾಗದ ಜಿಲ್ಲಾ ಅಧ್ಯಕ್ಷ ರಾಜು ಮಣ್ಣಿಕೇರಿ ಮಾತನಾಡಿ, ಉಮಾಶ್ರೀಯವರು ಒಂದು ಶಕ್ತಿಯಾಗಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಆಸ್ತಿ, ಅವರು ಉತ್ತಮ ಸಂಘಟನಾಕಾರರಾಗಿದ್ದು, ಕೆಪಿಸಿಸಿಯ ರಾಜ್ಯ ವಕ್ತಾರರಾಗಿ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತಸವಾಗಿದೆ. ಅವರು ಹೀಗೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ರಾಜು ಭದ್ರನ್ನವರ, ನೀಲಕಂಠ ಮುತ್ತೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಚಿದಾನಂದ ಗಾಳಿ, ಬಸವರಾಜ ಗುಡೋಡಗಿ, ಜಿಲ್ಲಾ ಎಸ್‍ಸಿ ವಿಭಾಗದ ಉಪಾಧ್ಯಕ್ಷ ತಮ್ಮಣಿ ಆಲಗೂರ, ತೇರದಾಳ ಮತಕ್ಷೇತ್ರದ ಅಧ್ಯಕ್ಷ ಅರವಿಂದ ಮಣ್ಣಿಕೇರಿ, ಅರ್ಜುನ ದೊಡಮನಿ, ಚಂದ್ರು ಹರಿಜನ, ಲಕ್ಷ್ಮಣ ಮಾಂಗ, ಸಾಗರ ಹೊಸಮನಿ, ದೀಪಕ ದೊಡಮನಿ, ಶೇಖರ ಗುಬಚಿ, ಪಿಂಟೂ ಕುಂಬಾರ, ಪುಟ್ಟಪ್ಪ ಪೂಜಾರಿ, ಸಾವಂತ ಮಾಂಗ, ಶಿವಾನಂದ ನಡುವಿನಕೇರಿ, ನಾಗೇಶ ಚಾಂಬರ, ಸೀತಾರಾಮ ಮಾದರ ಸೇರಿದಂತೆ ಅನೇಕರು ಇದ್ದರು.

Social Plugin