ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಆಣೆಕಟ್ಟೆಯ 10 ಗೇಟ್‍ಗಳ ಮೂಲಕ 1 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿರುವದು.

ಹಿಪ್ಪರಗಿ ಜಲಾಶಯದಿಂದ 10 ಗೇಟ್‍ಗಳ ಮೂಲಕ 1 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

ರಬಕವಿ-ಬನಹಟ್ಟಿ,ಅ15: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆಗಳು, ಮನೆಗಳು ಹಾಳಾಗಿವೆ.

ಮಹಾರಾಷ್ಟ್ರದಲ್ಲಿನ ಜಲಾಶಯಗಳು ಅಪಾರ ಪ್ರಮಾಣದ ಮಳೆಯಿಂದ ತುಂಬಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಕೃಷ್ಣಾ ನದಿ ಮೂಲಕ ರಾಜ್ಯಕ್ಕೆ ಹರಿಬಿಡಲಾಗಿದ್ದು, ನದಿ ಪಾತ್ರದ ಜನರು ಭಯದ ವಾತವಾರಣದಲ್ಲಿರುವಂತಾಗಿದೆ.

ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ರೈತರ ಬೆಳೆಗಾಳಾದ ಶೆಂಗಾ, ಮೆಕ್ಕೆಜೋಳ, ಕಬ್ಬು ಸೇರಿದಂತೆ ಲಕ್ಷಾಂತರ ರೂ ಬೆಲೆಯ ಬೆಳೆಗಳು ಮಳೆಯಿಂದ ಹಾನಿಗೀಡಾಗಿವೆ. ನದಿ ನೀರಿನ ಮಟ್ಟ ಗಂಟೆ ಗಂಟೆಗೂ ಏರಿಕೆಯಾಗುತ್ತಿದೆ. ಜಲಾಶಯದ 22 ಗೇಟ್‍ಗಳ ಪೈಕಿ 10 ಗೇಟ್‍ಗಳ ಮೂಲಕ ನೀರು ಬಿಡುಗಡೆ ಮಾಡಲಾಗುತ್ತಿದೆ. 

ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಬುಧುವಾರ ಸಂಜೆ 40 ಸಾವಿರ ಕ್ಯೂಸೆಕ್‍ಗಿಂತಲೂ ಅಧಿಕ ನೀರನ್ನು ಕೃಷ್ಣೆಗೆ ಹರಿಬಿಡಲಾಗುತ್ತಿದ್ದು, ಬೆಳಗಾವಿ ಜೆಲ್ಲೆಯ ಅನೇಕ ಹಳ್ಳಕೊಳ್ಳಗಳಿಂದ 60 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ನದಿಗೆ ಹರಿದು ಬರುತ್ತಿದೆ.