ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ಡಾ.ಶಿವರಾಮ ಕಾರಂತ ಅವರ ಜಯಂತ್ಯುತ್ಸವದ ನಿಮಿತ್ತವಾಗಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.

ಬಹುಮುಖ ವ್ಯಕ್ತಿತ್ವದ ವಿಶ್ವ ಕಂಡ ಮಹಾನ್ ಸಾಹಿತಿ ಡಾ.ಶಿವರಾಮ ಕಾರಂತ
ರಬಕವಿ-ಬನಹಟ್ಟಿ,ಅ11: ಕನ್ನಡಕ್ಕೆ ಅತ್ಯಂತ ಅಮೂಲ್ಯವಾದ ಸಾಹಿತ್ಯವನ್ನು ನೀಡಿದ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಶಿವರಾಮ ಕಾರಂತರು ಬಹುಮುಖ ವ್ಯಕ್ತಿತ್ವ ಹೊಂದಿದ ಮಹಾನ್ ಸಾಹಿತಿಗಳಾಗಿದ್ದರು ಎಂದು ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದ ಪ್ರಾಚಾರ್ಯ ಪೆÇ್ರ.ಸುರೇಶ ನಡೋನಿ ತಿಳಿಸಿದರು.
ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಡಾ.ಶಿವರಾಮ ಕಾರಂತರ ಜಯಂತ್ಯುತ್ಸವದ ನಿಮಿತ್ತವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಡಲತೀರ ಭಾರ್ಗವ, ಅಲೆಡಾಡುವ ವಿಶ್ವಕೋಶ, ಚಲಿಸುವ ನಿಘುಂಟ, ಪರಿಸರ ಪ್ರೇಮಿ ಎಲ್ಲಕ್ಕಿಂತ ಮುಖ್ಯವಾಗಿ ಅವರು ಯಕ್ಷಗಾನ ಕಲಾವಿದರಾಗಿದ್ದು, ಈ ಒಂದು ಕಲೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಡಾ. ಕಾರಂತರ ಕೊಡುಗೆ ಅಪಾರ ಎಂದು ಪೆÇ್ರ.ನಡೋನಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಮಾತನಾಡಿ, ಕನ್ನಡ ಸಾಹಿತ್ಯ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಹೊಂದಿದ ಭಾμÉಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜ್ಞಾನ ಪೀಠ ಪ್ರಶಸ್ತಿಗಳು ಕನ್ನಡಕ್ಕೆ ದೊರೆಯಲಿವೆ. ಅಂಥ ಅರ್ಹ ಸಾಹಿತಿಗಳು ಕನ್ನಡದಲ್ಲಿ ಇದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಆರ್.ಕೆ.ನಾರಾಯಣ ಅವರ ಜಯಂತ್ಯುತ್ವದ ನಿಮಿತ್ತವಾಗಿ ಅವರು ಗ್ರಂಥಗಳ ಪ್ರದರ್ಶನ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಡಾ.ಮಂಜುನಾಥ ಬೆನ್ನೂರ, ಡಾ.ಮನೋಹರ ಶಿರೋಳ, ವಿ.ವೈ.ಪಾಟೀಲ, ಶಿಲ್ಪಾ ಭಜಂತ್ರಿ, ಗೀತಾ ಗೊಂದಕರ್, ಕನ್ಯಾಕುಮಾರಿ ಹೂಗಾರ, ಓಂಕಾರ ಯರಗಟ್ಟಿಕರ್, ಶ್ವೇತಾ ಮಠದ, ಪೂಜಾ ಚತುರ್ವೇದಿ, ವಿಜಯಲಕ್ಷ್ಮಿ ಮಾಚಕನೂರ, ರವಿ ಕುಳ್ಳಿ,ಶೋಭಾ ಪಿಟಗಿ ಇದ್ದರು.