ಮನುಕುಲದ ಒಳಿತಿಗಾಗಿ ಶ್ರಮಿಸಿದವರು ಪ್ರವಾದಿ ಮಹ್ಮದರು
ರಬಕವಿ-ಬನಹಟ್ಟಿ,ಅ31: ಪ್ರವಾದಿ ಮಹ್ಮದರು ಮನುಕುಲದ ಒಳಿತಿಗಾಗಿ ಶ್ರಮಿಸಿದವರು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ನಗರದ ಅಂಜುಮನ್ ಕಾಂಪ್ಲೆಕ್ಸ್ ಹಿಂದುಗಡೆ ನಡೆದ ಅಂಜುಮನ್ ಎ ಇಸ್ಲಾಂ ಕಮೀಟಿ ಹಾಗೂ ಅಡಿಚಘರ ಮಕ್ಕಾ ಮಸಜೀದ ಬನಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಹಜರತ್ ಮಹ್ಮದ ಪೈಗಂಬರ ಜಯಂತಿ ವೃತ್ತಿನಿರತ ಅಧಿಕಾರಿ ವರ್ಗದವರಿಗೆ ಗೌರವ ಹಾಗೂ ಎಸ್‍ಎಸ್‍ಎಲ್‍ಸಿ ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಕ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಂತಿ, ನೆಮ್ಮದಿ, ಸಹನೆ, ವಿನಯಶೀಲತೆ ಬದುಕನ್ನು ಕಲಿಸಿ ಕೊಟ್ಟವರು ಅಂತಹ ಮಹಾನುಭಾವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸುಂದರ ಬದುಕನ್ನು ನಿರ್ಮಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾದ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನೇಮಗೌಡ ಮಾತನಾಡಿ ಬಹುಭಾಷಾ ಸಂಸ್ಕ್ರತಿ ಹೊಂದಿದ ದೇಶ ನಮ್ಮದು, ತಂದೆ ಮಗುವಿಗೆ ಉತ್ತಮವಾದ ಶಿಕ್ಷಣ ನೀಡಬೇಕು ಎಂಬ ಸಂದೇಶವನ್ನು ಸಾರಿದವರು ಮಹ್ಮದರು, ವ್ಯಕ್ತಿ ಜೀವನದಲ್ಲಿ ಮುಂದೆ ಬರಲು ಶಿಕ್ಷಣ ಮೂಲ ಕಾರಣ ಎಂದರು.
ಅತಿಥಿ ಜಮಖಂಡಿ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಓದು ಎನ್ನುವುದು ಕುರಾನಿನ ಪ್ರಥಮ ವಾಕ್ಯ, ನಾನು ಓದುವುದರ ಜೊತೆಗೆ ನನ್ನ ಮಕ್ಕಳಿಗೆ ಓದಲು ಪ್ರೇರೆಪಿಸಬೇಕು. ಪಾಲಕರು ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಒಂದು ಹೊತ್ತು ಊಟ ನಿಲ್ಲಿಸಿದರು ಪರವಾಗಿಲ್ಲ ಅವರ ಶಿಕ್ಷಣಕ್ಕಾಗಿ ಮಹತ್ವ ನೀಡಬೇಕು. ಮಹ್ಮದರು ಸಾಮಾಜಿಕ, ಧಾರ್ಮಿಕ ರಂಗದಲ್ಲಿ ಮಾಡಿದ ಸಾಧನೆ ಅದ್ಬುತವಾದುದು ಎಂದರು.
ಪಿಎಸ್‍ಐ ರವಿಕುಮಾರ ಧರ್ಮಟ್ಟಿ, ಮೌಲಾನಾ ಮೋಹಸೀನ ಅತ್ತಾರ, ಗಣ್ಯ ವರ್ತಕರಾದ ಮಾಮೂನರಶೀದ ಪಾರ್ಥನಳ್ಳಿ, ಬನಹಟ್ಟಿ ಅಂಜುಮನ್ ಎ ಇಸ್ಲಾಂ ಕಮೀಟಿ ಅಧ್ಯಕ್ಷ ಹಾರೂನ ರಶೀದ ಸಾಂಗ್ಲೀಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು
ವೇದಿಕೆ ಮೇಲೆ ಅಧ್ಯಕ್ಷ ಮಲೀಕ ಮುಜಾವರ, ರಫೀಕಹ್ಮದ ಡಾಂಗೆ, ಜಿ.ಪಂ. ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ನಗರಸಭಾ ಸದಸ್ಯ ಯುನೂಸ ಚೌಗಲಾ, ಆನಂದ ಕಂಪು, ಪುಂಡಲೀಕ ಪಾಲಬಾಂವಿ, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಡಾ ಮಹ್ಮದಸಾಧ ಅಥಣಿಕರ, ಎನ್‍ಜಿಓ ಪ್ರಧಾನ ಕಾರ್ಯದರ್ಶಿ ಆಯ್.ಎ. ಡಾಂಗೆ, ಶೌಕತ್ ಅತ್ತಾರ, ಅಲ್ಲಾವುದ್ದೀನ ತಾಂಬೋಳಿ, ಅಯ್ಯುಬಖಾನ ಹೊರಟ್ಟಿ, ಉದ್ದಿಮೆದಾರ ಇಸಾಕಅಹ್ಮದ ನಿಪ್ಪಾಣಿ, ಮೌಲಾಸಾಬ ಜಮಾದಾರ, ಇಕ್ಬಾಲ ಲೇಂಗ್ರೆ, ಹಾರೂನ ಬೇವೂರ, ಅಬುಬಕರ ಅತ್ತಾರ, ಎ.ಎನ್ ನದಾಫ ಉಪಸ್ಥಿತರಿದ್ದರು.

Social Plugin