ಮಳೆರಾಯನ ಆರ್ಭಟ ಮತ್ತೆ ಶುರು
ರಬಕವಿ-ಬನಹಟ್ಟಿ,ಅ21: ಎರಡು-ಮೂರು ದಿನಗಳ ಮಟ್ಟಿಗೆ ತಣ್ಣಗೆ ಕೂತಿದ್ದ ಮಳೆರಾಯ ಸೋಮವಾರ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಪುನ: ತನ್ನ ಆರ್ಭಟ ಮೆರೆದಿದ್ದಾನೆ. ಮಳೆಯ ಆರ್ಭಟ ಹೆಚ್ಚಾದ್ದರಿಂದ ಮತ್ತೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರಿ ಮಳೆ ಸುರಿಯುತ್ತಿರುವ ತಾಲೂಕಿನ ಹಲವು ಭಾಗಗಳಲ್ಲಿ 300 ಕ್ಕೂ ಅಧಿಕ ಮನೆಗಳು ಬಿದ್ದಿದ್ದು, ಕೆಲವು ಜಖಂಗೊಂಡಿವೆ. 20 ಲಕ್ಷಕ್ಕೂ ಅಧಿಕ ಹಾನಿಯುಂಟಾಗಿದೆ. ಅದೃಷ್ಟವಶಾತ್ ಯಾವದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಮಳೆ ಹಾನಿ: ತಾಲೂಕಿನ ಜಗದಾಳ, ನಾವಲಗಿ, ತಮದಡ್ಡಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ತಲಾ 15 ರಿಂದ 20 ಮನೆಗಳು ಬಿದ್ದಿದ್ದು, ವಾಣಿಜ್ಯ ಬೆಳೆಗಳಾದ ಕಬ್ಬು, ವಿಳ್ಯದೆಲೆ, ಬಾಳೆ, ಅರಿಷಿಣ ನೀರಿನಿಂದ ಬೆಳೆ ಹಾನಿಯಾಗಿವೆ.
ಇವೆಲ್ಲದಕ್ಕೂ ಪರಿಶೀಲನೆ ನಡೆಸಿ ತೇರದಾಳ ಶಾಸಕ ಸಿದ್ದು ಸವದಿ ಹಾಗು ರಬಕವಿ-ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೊಂಡ ಮಹತ್ವದ ಸಭೆ ನಡೆಸುವ ಮೂಲಕ ಪರಿಹಾರದ ಲೆಕ್ಕಾಚಾರದಲ್ಲಿದ್ದಾರೆ.

Social Plugin