ದಂಡ ವಿಧಿಸುವದನ್ನು ಕೈಬಿಡಬೇಕೆಂದು ಸಾಮಾಜಿಕ ಕಾರ್ಯಕರ್ತರ ಸುಮಿತ್ ಬಂಗಿ ಉಪತಹಶೀಲ್ದಾರ ಎಸ್.ಬಿ. ಕಾಗಿಯವರಿಗೆ ಮನವಿ ಅರ್ಪಿಸಿದರು.

ಮಾಸ್ಕ್ ಕಡ್ಡಾಯ: ದಂಡ ಕೈ ಬಿಡಲು ಒತ್ತಾಯ
ರಬಕವಿ-ಬನಹಟ್ಟಿ,ಅ20: ದಿನಂಪ್ರತಿ ಸೀರೆ ನೇಯ್ಗೆಗೆ, ಹೊಲ ಗದ್ದೆಗಳಿಗೆ ತೆರಳುವ ಕೂಲಿ ಕಾರ್ಮಿಕರಿಗೆ ದಂಡ ಮಾರಕವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರ ಸುಮಿತ್ ಬಂಗಿ ತಿಳಿಸಿದ್ದಾರೆ.
ದಿನಪೂರ್ತಿ ದುಡಿದು ಬಂದು, ಆಕಸ್ಮಿಕವಾಗಿ ಮಾಸ್ಕ್ ಧರಿಸದಿರುವ ಕಾರಣ ಮನೆಗಳಿಗೆ ತೆರಳುವ ಸಂದರ್ಭ ಇಲ್ಲಿನ ನಗರಸಭೆ ಅಥವಾ ಕಂದಾಯ ಇಲಾಖೆ ಸಿಬ್ಬಂದಿಗಳಿಂದ ದಂಡಕ್ಕೆ ಸಿಲುಕಿ ನರಳಾಡುವ ಸ್ಥಿತಿ ಎದುರಾಗಿದೆ ಎಂದು ಬಂಗಿ ಆರೋಪಿಸಿದರು.
ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಉಪತಹಶೀಲ್ದಾರ ಎಸ್.ಬಿ. ಕಾಗಿಯವರ ಅವರಿಗೆ ಮನವಿ ಅರ್ಪಿಸಿ ಮಾತನಾಡಿದ ಅವರು, ಕೆಲ ಕಟ್ಟಕಡೆಯ ಸಮುದಾಯದ ಕುಟುಂಬಗಳು ಅದೇ ದಿನ ದುಡಿದು ಅಂದೇ ತರುವ ಹಣ ಸುಮಾರು 200 ರಿಂದ 250 ರೂ.ಗಳನ್ನು ದಂಡದ ರೂಪವಾಗಿ ಹಣ ಪಾವತಿಸುತ್ತಿರುವದರಿಂದ ಖಾಲಿ ಕೈಗಳಲ್ಲಿ ಮನೆಗೆ ತೆರಳುವ ದುಸ್ಥಿತಿ ಎದುರಾಗಿ, ಒಂದೊಂದು ದಿನ ಮನೆಯಲ್ಲಿ ಕುಟುಂಬ ಉಪವಾಸದಿಂದ ಬಳಲುವಂತಾಗಿದೆ.