ಬನಹಟ್ಟಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ 88.47 ಲಕ್ಷ ವೆಚ್ಚದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದ ಶಾಸಕ ಸಿದ್ದು ಸವದಿ
89 ಲಕ್ಷ ರೂ. ವೆಚ್ಚದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ರಬಕವಿ-ಬನಹಟ್ಟಿ,ಅ17: ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಅದರ ಜೊತೆಗೆ ತೇರದಾಳ ಮತಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಅವರು ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ 88.47 ಲಕ್ಷ ವೆಚ್ಚದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ಜಮಖಂಡಿಯ ಪಂಚಾಯತ ರಾಜ್ಯ ಉಪವಿಭಾಗದ ವತಿಯಿಂದ 2018-19ನೇ ಸಾಲಿನಲ್ಲಿ ರಾಜ್ಯದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸೌಲಭ್ಯಗಳ ನಿರ್ಮಾಣ ಯೋಜನೆಯಡಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದೆ. ಇದರಿಂದ ರಬಕವಿ-ಬನಹಟ್ಟಿ ನಗರಗಳ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಕೊಠಡಿ ನಿರ್ಮಾಣದಿಂದ ಅನುಕೂಲವಾಗಲಿದೆ. ಬಹಳ ದಿನಗಳ ಕಾಲ ಬೇಡಿಕೆಯಾಗಿದ್ದ ಇದು ಇಡೇರಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜೇಂದ್ರ ಅಂಬಲಿ, ಪ್ರಭಾರ ಪ್ರಾಚಾರ್ಯ ಚಂದ್ರಪ್ರಭಾ ಬಾಗಲಕೋಟ, ಪಂಚಾಯತ ರಾಜ್ಯನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ. ಎ. ಗೌಡರ, ಕಿರಿಯ ಅಭಿಯಂತರ ಎಚ್. ಜಿ. ಪಾತ್ರೋಟ, ಉಪನ್ಯಾಸಕರಾದ ಎಸ್. ಎಂ. ಕರಿಗಾರ, ಪಿ. ಬಿ. ಮನಗೂಳಿ, ಎಂ. ಎಂ. ಹಾಸೀಲಕರ, ಮಧುಕೇಶ್ವರ ಬೆಳಗಲಿ, ಶಿವಾನಂದ ಕನಾಳ ಸೇರಿದಂತೆ ಅನೇಕರು ಇದ್ದರು.

Social Plugin