ಬನಹಟ್ಟಿಯ ಪೊಲೀಸ್ ಠಾಣೆಯ ಆವರಣದಲ್ಲಿ ಸ್ವಚ್ಛತೆ ಹಾಗೂ ಸಸಿನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿದ ಸಿಪಿಐ ಜೆ. ಕರುಣೇಶಗೌಡ
ಜೀವ ಸಂಕುಲ ಸಂರಕ್ಷಣೆಗಾಗಿ ಸಸಿ ಬೆಳೆಸಿ
ರಬಕವಿ-ಬನಹಟ್ಟಿ,ಅ6: ಜೀವ ಸಂಕುಲ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಸಸಿ ನೆಟ್ಟು ಅದರ ಪೋಷಣೆಗೆ ಮುಂದಾಗಬೇಕು ಎಂದು ಬನಹಟ್ಟಿ ಸಿಪಿಐ ಜೆ. ಕರುಣೇಶಗೌಡ ಹೇಳಿದರು.
ಅವರು ಬನಹಟ್ಟಿಯ ಪೊಲೀಸ್ ಠಾಣೆಯ ಆವರಣದಲ್ಲಿ ಸ್ವಚ್ಛತೆ ಹಾಗೂ ಸಸಿನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರ ಮನುಷ್ಯನ ಆಸೆಗಳನ್ನು ಪೂರೈಸುತ್ತದೆ ಆದರೆ ದುರಾಸೆಯನ್ನಲ್ಲ, ಪ್ರಕೃತಿಯ ನಿಯಮದ ವಿರುದ್ದ ಹೋಗದೆ ಅದರೊಂದಿಗೆ ಹೋದಾಗ ಮಾತ್ರ ಅದು ಸಮತೋಲನ ಕಾಪಾಡುವುದು. ಇಂದಿನ ದಿನಗಳಲ್ಲಿ ಪರಿಸರ ಜಾಗೃತಿ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್‍ಐ ರವಿಕುಮಾರ ಧರ್ಮಟ್ಟಿ, ಎಎಸ್‍ಐ ಎ. ಎಲ್. ಹಲಕಿ, ಸಂತೋಷ ಮುರಡಿ, ಎನ್. ಎಂ. ಸಂತಿವೂರ, ಅಲ್ಲಾಭಕ್ಷ ಜಮಖಂಡಿ, ವಿ. ಎಸ್. ಅಜ್ಜನಗೌಡರ, ಬಿ. ಎಂ. ಬಡಿಗೇರ, ಕಿರಣ ತೇಲಿ, ಮುತ್ತಪ್ಪ ಕೋಲೂರ ಸೇರಿದಂತೆ ಅನೇಕರು ಇದ್ದರು.

Social Plugin