ಬಿಡಿಸಿಸಿ ಚುನಾವಣಾ ಕಣಕ್ಕೆ ಮಗದುಮ್?
ರಬಕವಿ-ಬನಹಟ್ಟಿ,ಅ5: ಕಳೆದ ಎರಡು ಅವಧಿಯಲ್ಲಿ ಜಮಖಂಡಿ ತಾಲೂಕು ಪಿಕೆಪಿಎಸ್ ವಿಭಾಗದಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಚುನಾಯಿತಗೊಂಡಿದ್ದ ಬನಹಟ್ಟಿಯ ಪಿಕೆಪಿಎಸ್ ಬ್ಯಾಂಕ್‍ನ ಅಧ್ಯಕ್ಷ ಭೀಮಶಿ ಮಗದುಮ್ ಮತ್ತೊಂದು ಬಾರಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಪಕ್ಷವಾಗಿ ಮತ್ತೇ ಕಣಕ್ಕಿಳಿಯಬೇಕೆಂಬ ಲೆಕ್ಕಾಚಾರ ಹೊಂದಿದ್ದರು. ಈ ಭಾರಿ ಆಕಾಂಕ್ಷಿಗಳ ಸರಮಾಲೆಯೇ ತಾಲೂಕಿನಾದ್ಯಂತ ಸಿದ್ಧಗೊಂಡ ಕಾರಣ ಕೊನೆಯ ಕ್ಷಣದಲ್ಲಿ ಬಹುತೇಕರ ಬೆಂಬಲದೊಂದಿಗೆ ತೇರದಾಳ ಶಾಸಕ ಸಿದ್ದು ಸವದಿ ಅಚ್ಚರಿ ಮೂಲಕ ಕಣಕ್ಕಿಳಿದು, ಇದೀಗ ಅಬ್ಬರದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.
ಇವೆಲ್ಲವನ್ನೂ ಅವಲೋಕಿಸಿದ ಮಗದುಮ್, ಪ್ರತ್ಯೇಕವಾಗಿ ಕಣಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸುವಲ್ಲಿ ಕಾರಣರಾಗಿದ್ದು, ಇನ್ನೆರಡು ದಿನಗಳಲ್ಲಿ ಸ್ಪಷ್ಟ ನಿರ್ಣಯ ತಿಳಿಸುವದಾಗಿ ಪತ್ರಿಕೆಗೆ ತಿಳಿಸಿದರು.
Social Plugin