ರಬಕವಿ-ಬನಹಟ್ಟಿ ತಹಶೀಲ್ಧಾರ ಪ್ರಶಾಂತ ಚನಗೊಂಡರ ಮೂಲಕ ರಾಷ್ಟ್ರಪತಿಗೆ ವಾಲ್ಮೀಕಿ ಸಮಾಜದಿಂದ ಮನವಿ ಸಲ್ಲಿಸಲಾಯಿತು.
ದಲಿತ ಯುವತಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ರಬಕವಿ-ಬನಹಟ್ಟಿ,ಅ3: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ದಲಿತ ಯುವತಿ ಮನಿಷಾ ವಾಲ್ಮೀಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಹಾಗು ಅತ್ಯಾಚಾರ ಮಾಡಿದ ನಾಲ್ವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ರಬಕವಿ-ಬನಹಟ್ಟಿ ತಾಲೂಕು ಮಹರ್ಷಿ ವಾಲ್ಮೀಕಿ ಸಂಘ ಹಾಗು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಶನಿವಾರ ಸ್ಥಳೀಯ ತಹಶೀಲ್ದಾರ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರಶಾಂತ ಚನಗೊಂಡರ ಮೂಲಕ ರಾಷ್ಟ್ರಪತಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಯುವತಿ ಮನಿಷಾ ವಾಲ್ಮೀಕಿ ಅವರ ಮೇಲೆ ನಾಲ್ವರು ಪಾಪಿಗಳು ಸಾಮೂಹಿಕವಾಗಿ ಅತ್ಯಾವಾರವೆಸಗಿ ಕೊಲೆ ಮಾಡಿದ್ದು ಖಂಡನೀಯ. ತಕ್ಷಣವೇ ಆರೋಪಿಗಳಿಗೆ ಕಾನೂನುಬದ್ಧ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಈ ವೇಳೆ ಕಾಡಪ್ಪ ಮಂಟೂರ, ಎಫ್.ಬಿ. ತಳವಾರ ಮಾತನಾಡಿ ಉತ್ತ ಪ್ರದೇಶದಲ್ಲಿ ಕಳೆದ ಸೆ.14 ರಂದುದಲಿತ ಯುವತಿ ಮನಿಷಾ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರಿಗೆ ಯಾವದೇ ರಕ್ಷಣೆ ಇಲ್ಲದಂತಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ದಲಿತರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ಯುವತಿ ಸಾವಿನ ತನಿಖೆಯನ್ನು ಸಿಓಡಿ ತನಿಖೆ ನಡೆಸಬೇಕೆಂದರು.
ಪ್ರತಿಭಟನೆಯಲ್ಲಿ ಚಂದ್ರಕಾಂತ ಪೋಲಿಸ್, ಪ್ರಕಾಶ ಸನದಿ, ಶಿವಕುಮಾರ ಕುಳ್ಳೋಳ್ಳಿ, ಕಾಶಿರಾಯ ನಾಯಕ, ಪರಸಪ್ಪ ನಾಯಕ, ರಮೇಶ ನಾಯಕ, ಪರಶುರಾಮ ಗುಬ್ಬಿ, ಮಾಳು ನಾಯಕ, ಪರಶುರಾಮ ಗುಬ್ಬಿ, ಮಾಳು ನಾಯಕ, ಶ್ರೀಶೈಲ ನಾಯಕ, ಮಲ್ಲಯ್ಯ ಜಕ್ಕನೂತ, ಪರಸಪ್ಪ ದೊಡಮನಿ, ರಾಮಣ್ಣ ದಳವಾಯಿ, ಭಗವಂತ ಬಿಸನಾಳ, ವಿಠ್ಠಲ ಜಕ್ಕನೂರ, ಸಂಗಪ್ಪ ಸಂತಿ, ಆನಂದ ಸಂತಿ, ಮಂಜು ನಿಡೋನಿ, ಹಾಲೇಶ ಅಡವಿಹಳ್ಳಿ, ಅರ್ಜುನ ಹಳ್ಳೂರ, ಸುರೇಶ ತಳವಾರ, ಪ್ರಭು ಬಂಡಿ, ರಾಖೇಶ ಬೀಳಗಿ, ಸಂಗಪ್ಪ ಸಂತಿ, ರಮೇಶ ಮಿಳ್ಳಿಗೇರಿ ಸೇರಿದಂತೆ ಅನೇಕರಿದ್ದರು.
Social Plugin