ರೈತ ವಿರೋಧಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ತೇರದಾಳ ಪಟ್ಟಣದಲ್ಲಿ ರೈತರು ಹಾಗೂ ಸಾರ್ವಜನಿಕರಿಂದ ಸಹಿ ಸಂಗ್ರಹಕ್ಕೆ ಮಾಜಿ ಸಚಿವೆ ಉಮಾಶ್ರೀ ಚಾಲನೆ ನೀಡಿ ಮಾತನಾಡಿದರು.
ತೇರದಾಳ : ಬಿಜೆಪಿ ಸರಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಉತ್ತಮ ಸರಕಾರ ನಡೆಸುವಲ್ಲಿ ವಿಫಲವಾಗಿದೆ. ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿ ಆಡಳಿತವನ್ನು ನಡೆಸುತ್ತಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಪಟ್ಟಣದಲ್ಲಿ ರೈತ ವಿರೋಧಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ರೈತರು ಹಾಗೂ ಸಾರ್ವಜನಿಕರಿಂದ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಏಕ ಪಕ್ಷೀಯವಾಗಿ ತೀರ್ಮಾಣ ಕೈಗೋಳ್ಳುವ ಈ ಸರಕಾರ ಆಡಳಿತವನ್ನು ಕ್ರಮಬದ್ಧವಾಗಿ, ಸಂವಿಧಾನ ಬದ್ಧವಾಗಿ, ಪ್ರಜಾಪ್ರಭುತ್ವಕ್ಕೆ ಗೌರವ ಕೊಟ್ಟು ಸಣ್ಣ ಸಣ್ಣ ಸಮಸ್ಯೆಗಳಿಗೆ ಉತ್ತರಕೊಟ್ಟು ಬಿಲ್‍ಗಳನ್ನು ಪಾಸ ಮಾಡಬೇಕಾಗಿತ್ತು. ಎಪಿಎಮ್‍ಸಿಯನ್ನು ಸದೃಢಗೊಳಿಸಲು ಎಪಿಎಂಸಿ ಮುಖಾಂತರ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಬೇಕು. ಸಮಾನಂತರವಾಗಿ ಕಾಯ್ದೆಗಳು ಎಲ್ಲರಿಗೂ ಅನುಕೂಲವಾಗಿರಬೇಕು. ಇದು ಏಕ ಮುಖವಾಗಿದೆ. ಸಾರ್ವಜನಿಕರ ಸಹಿ ಸಂಗ್ರಹ ಮಾಡಿರಾಷ್ಟ್ರಪತಿಗಳಿಗೆ ಕಳುಹಿಸುವ ಉದ್ಧೇಶದಿಂದ ಈ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.
ಯುವ ಧುರೀಣ ಪ್ರವೀಣ ನಾಡಗೌಡ ಮಾತನಾಡಿ ರೈತರ ವಿರೋಧಿಯಾಗಿರುವ ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣೆ ಕಾಯ್ದೆಯನ್ನು ಹಿಂಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮಣ ದೇಸಾರಟ್ಟಿ, ಸುರೇಶ ಕಬಾಡಗಿ, ಪ್ರಭು ಗಸ್ತಿ, ಮಾಶೂಂ ಇನಾಮದಾರ, ಪಿ.ಎಸ್.ಮಾಸ್ತಿ, ವಿಶ್ವನಾಥ ಹಿರೇಮಠ, ದಯಾನಂದ ಕಾಳೆ, ಶಿವಾನಂದ ನಡುವಿನಕೇರಿ, ಆಧಿನಾಥ ಸಪ್ತಸಾಗರ, ಮುಸ್ತಫಾ ಮೋಮಿನ್, ರಾಜೇಸಾಬ ನಗಾರ್ಜಿ, ರಾಜು ಹೊಸಮನಿ, ಲಕ್ಷ್ಮಣ ಮಾಸ್ತಿ ಸೇರಿದಂತೆ ಇನ್ನಿತರರು ಇದ್ದರು.
Social Plugin