ರಬಕವಿ-ಬನಹಟ್ಟಿ ನಗರಸಭಾಧ್ಯಕ್ಷ ಸ್ಥಾನ
ನ್ಯಾಯಾಲಯಕ್ಕೆ ಮೊರೆ ಹೋದವರಿಗೆ ನ್ಯಾಯ ಕೊಡಿ
-ಮಲ್ಲಿಕಾರ್ಜುನ ತುಂಗಳ
*ಉಪಾಧ್ಯಕ್ಷ ಸ್ಥಾನಕ್ಕೆ `ಮಣೆ’ ಹಾಕದ ಮಹಿಳಾ `ಮಣಿ’ಗಳು
ರಬಕವಿ-ಬನಹಟ್ಟಿ,ಅ13: ಇದೀಗ ನೂತನವಾಗಿ ನಗರಸಭೆಯ ಮೀಸಲಾತಿ ಪಟ್ಟಿ ಪ್ರಕಟಗೊಂಡಿರುವ ಹಿನ್ನಲೆಯಲ್ಲಿ ರಬಕವಿ-ಬನಹಟ್ಟಿ ನಗರಸಭೆಯ ಅಧ್ಯಕ್ಷ ಗದ್ದುಗೆಗೆ ಎಂದೂ ಕಂಡರಿಯದ ಪೈಪೋಟಿ ಎದುರಾಗಿದ್ದು ವಿಶೇಷ.
ಕಳೆದೆರಡು ವರ್ಷಗಳ ಹಿಂದೆ ಚುನಾವಣೆ ನಂತರದ ಸಮಯದಲ್ಲಿ ನೂತನ ಸದಸ್ಯರಾಗಿ ಆಯ್ಕೆಗೊಂಡ ಬನಹಟ್ಟಿಯಿಂದ ವಾರ್ಡ್ ನಂ.7 ರ ಪ್ರಭಾಕರ ಮೊಳೇದ, ಶಿವಾನಂದ ಬುದ್ನಿ, ಶ್ರೀಶೈಲ ಬೀಳಗಿ ಹಾಗು ರಬಕವಿಯಿಂದ ಸಂಜಯ ತೆಗ್ಗಿ ತೀವ್ರ ಆಕಾಂಕ್ಷಿ ಪಟ್ಟಿಯಲ್ಲಿದ್ದರು.
ದಿನಗಳು ಉರುಳಿದಂತೆ ಎರಡು ವರ್ಷಗಳ ಬಳಿಕ ಇಡೀ ಚಿತ್ರಣವೇ ಬದಲಾಗಿದ್ದು, ನಗರಸಭೆಯಲ್ಲಿ 31 ಸದಸ್ಯರ ಪೈಕಿ 24 ಸದಸ್ಯರು ಬಿಜೆಪಿಯಿಂದ ಗೆಲುವು ಸಾಧಿಸಿದವರಾಗಿದ್ದು, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಪಾಲಾಗಿದ್ದರೂ, ಈ ಸ್ಥಾನಕ್ಕೆ ಮಣೆ ಹಾಕದ ಮಹಿಳಾ ಮಣಿಗಳು, ಸಾಮಾನ್ಯ ವರ್ಗದ ಸ್ಥಾನ ಹೊಂದಿರುವ ಅಧ್ಯಕ್ಷ ಸ್ಥಾನದ ಮೇಲೆ ಅವರ ಕಣ್ಣು ಬಿದ್ದಿದ್ದು, ಬಹುತೇಕ ಎಲ್ಲರೂ ಆಕಾಂಕ್ಷಿದಾರರಾಗಿದ್ದಾರೆ.
ಇದೇ ಸಂದರ್ಭ ನಗರಸಭಾ ಸದಸ್ಯ ಶಿವಾನಂದ ಬುದ್ನಿ ಮಾತನಾಡಿ, ಕಳೆದೆರಡು ವರ್ಷಗಳ ಹಿಂದೆ ಪಕ್ಷದ ಹಿರಿಯರ ಸಮ್ಮುಖದಲ್ಲಿ ಮೀಸಲಾತಿ ಪಟ್ಟಿ ಸಂಬಂಧ ನ್ಯಾಯಾಲಯದಲ್ಲಿತ್ತು. ಆ ಸಂದರ್ಭ ರಬಕವಿ-ಬನಹಟ್ಟಿ ನಗರಸಭೆಯಿಂದ ನ್ಯಾಯಾಲಯ ಮೆಟ್ಟಿಲೇರುವಲ್ಲಿ ನನ್ನೊಂದಿಗೆ ಪ್ರಭಾಕರ ಮೊಳೇದ ಹಾಗು ರಬಕವಿಯ ಸಂಜಯ ತೆಗ್ಗಿ ಸೇರಿ ನ್ಯಾಯದ ಮೊರೆ ಹೋಗಿದ್ದೆವು. ಅದರಂತೆ ಸಾಮಾನ್ಯ ವರ್ಗಕ್ಕೆ ಸೀಮಿತಗೊಂಡಿರುವ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಬನಹಟ್ಟಿಗೆ ಮೀಸಲಿರುವ ಕಾರಣ ಇಬ್ಬರೊಳಗೆ ಒಬ್ಬರ ಆಯ್ಕೆ ಪಕ್ಷದ ಹಿರಿಯರು ಮಾಡಲಿದ್ದಾರೆಂಬ ನಂಬಿಕೆ ನನ್ನದಾಗಿದೆ ಎಂದರು.

Social Plugin