ಆಸಂಗಿಯಲ್ಲಿ 42.81 ಲಕ್ಷ ವೆಚ್ಚದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದ ಶಾಸಕ ಸಿದ್ದು ಸವದಿ

ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ

* ಸಾಮಾಜಿಕ ಅಂತರ, ಮಾಸ್ಕ ಕಡ್ಡಾಯವಾಗಿ ಬಳಸಿ

ರಬಕವಿ-ಬನಹಟ್ಟಿ,ಅ1: ಕರ್ನಾಟಕ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ಶಾಸಕ ಹಾಗೂ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ್ಷ ಸಿದ್ದು ಸವದಿ ಹೇಳಿದರು.

ಅವರು ಸಮೀಪದ ಆಸಂಗಿಯಲ್ಲಿ 42.81 ಲಕ್ಷ ವೆಚ್ಚದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ಶಾಲೆಗಳು ನಾಳಿನ ಪ್ರಜೆಗಳನ್ನು ನಿರ್ಮಾಣ ಮಾಡುವ ಕೇಂದ್ರಗಳು ಅವುಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕು. ಪ್ರತಿಯೊಬ್ಬರು ತಪ್ಪದೇ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ ಧರಿಸಿ ಕೋವಿಡ್-19 ನಿಯಂತ್ರಣಕ್ಕೆ ಸಹಕರಿಸಿ ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಆನಂದ ಕಂಪು, ತಾ. ಪಂ. ಉಪಾಧ್ಯಕ್ಷೆ ಭಾರತಿ ಸಣ್ಣಕ್ಕಿ, ಹರ್ಷವರ್ಧನ ಪಟವರ್ಧನ, ಎಸ್‍ಡಿಎಂಸಿ ಅಧ್ಯಕ್ಷ ಅಲ್ಲಪ್ಪ ಸವದತ್ತಿ, ಉಪಾಧ್ಯಕ್ಷೆ ಸುರೇಖಾ ಗಾಯಕವಾಡ, ಪರಶುರಾಮ ಗಾಯಕವಾಡ, ರಾಜು ಪಾಟೀಲ, ತಿಪ್ಪಣ್ಣ ಸಣ್ಣಕ್ಕಿ, ಬಾಳಪ್ಪ ಗಾಯಕವಾಡ, ಯಮನಪ್ಪ ಪದ್ದಿ, ದೋಂಡಿಬಾ ಗಾಯಕವಾಡ, ಮುತ್ತುರಾಜ ಶಿರಹಟ್ಟಿ, ಬಸಪ್ಪ ಖೆಮನ್ನವರ, ತವನಪ್ಪ ಕೋರಿ, ಮುಖ್ಯ ಗುರು ಕೆ. ಎನ್. ತೆಲಗಾಂವಿ ಸೇರಿದಂತೆ ಅನೇಕರು ಇದ್ದರು.