ಆಸಂಗಿಯ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 2019-2020ನೇ ಸಾಲಿನ ಎರಡನೇ ಜೊತೆ ಸಮವಸ್ತ್ರ ವಿತರಣೆ ಮಾಡಿದ ಶಾಸಕ ಸಿದ್ದು ಸವದಿ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

ರಬಕವಿ-ಬನಹಟ್ಟಿ,ಅ1: ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕರ್ನಾಟಕ ಸರಕಾರ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು. 

ಅವರು ತಾಲೂಕಿನ ಆಸಂಗಿಯ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 2019-2020ನೇ ಸಾಲಿನ ಎರಡನೇ ಜೊತೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಸಮವಸ್ತ್ರ ವಿತರಿಸಿ ಮಾತನಾಡಿದರು. ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಆನಂದ ಕಂಪು, ಎಸ್‍ಡಿಎಂಸಿ ಅಧ್ಯಕ್ಷ ಅಲ್ಲಪ್ಪ ಸವದತ್ತಿ, ಉಪಾಧ್ಯಕ್ಷೆ ಸುರೇಖಾ ಗಾಯಕವಾಡ, ಮುಖ್ಯ ಗುರುಗಳಾದ ಕೆ. ಎನ್. ತೆಲಗಾಂವ, ಆರ್. ಟಿ. ರಾಠೋಡ, ಎ. ಜಿ. ಮಹಾಲಿಂಗಪೂರ, ಎ. ಬಿ. ಕುಲಕರ್ಣಿ, ಎಸ್. ಬಿ. ಖವಟಕೊಪ್ಪ ಸೇರಿದಂತೆ ಅನೇಕರು ಇದ್ದರು.