ರಬಕವಿ-ಬನಹಟ್ಟಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಆಂಬುಲೆನ್ಸ್ ಸೇವೆಗೆ ಶಾಸಕ ಹಾಗೂ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಚಾಲನೆ ನೀಡಿದರು.

ರಬಕವಿ-ಬನಹಟ್ಟಿ,ಅ15: ರಬಕವಿ-ಬನಹಟ್ಟಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಆಂಬುಲೆನ್ಸ್ ಸೇವೆಗೆ ಶಾಸಕ ಹಾಗೂ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಹಳ ದಿನಗಳಿಂದ ನಮ್ಮ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಸೇವೆ ಅಗತ್ಯವಿತ್ತು. ಸಾಕಷ್ಟು ಬಾರಿ ಇದರ ಬಗ್ಗೆ ಮಾನ್ಯ ಸಚಿವರು ಜೊತೆ ಚರ್ಚೆ ನಡೆಸಿದ್ದೇ ಆದರೆ ಇಂದು ಆ ಸೌಭಾಗ್ಯ ನಮ್ಮ ಜನರಿಗೆ ದೊರಕಿದೆ.  ರಬಕವಿ-ಬನಹಟ್ಟಿ ತಾಲೂಕಿನ ಎಲ್ಲ ಜನರ ಈ ಸೇವೆಯನ್ನು ಬಳಸಿಕೊಳ್ಳಿ. ತಮ್ಮ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸವದಿ ಹೇಳಿದರು. 

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸದಸ್ಯ ಪುಂಡಲಿಕ ಪಾಲಬಾಂವಿ, ರಾಜು ಅಂಬಲಿ, ರಾಜು ಬಾಣಕಾರ, ರಬಕವಿ-ಬನಹಟ್ಟಿ  ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಎನ್. ಎಮ್. ನದಾಫ, ಡಾ. ವೀರೆಶ ಹುಡೆದಮನಿ ಸೇರಿದಂತೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಇದ್ದರು.