1 ಕೋಟಿ ರೂ. ವೆಚ್ಚದ ಪಟ್ಟಣ ರಸ್ತೆಗಳ ಕಾಮಗಾರಿಗೆ ಚಾಲನೆ-ಸವದಿ
ರಬಕವಿ-ಬನಹಟ್ಟಿ,ಅ30: ನಗರಸಭೆ ವಿವಿಧ ಅನುದಾನದಡಿಯಲ್ಲಿ ಬನಹಟ್ಟಿಯ ಪಟ್ಟಣದ ರಸ್ತೆಗಳ ಒಟ್ಟು 3.5 ಕಿ.ಮೀ.ನಷ್ಟು ಡಾಂಬರೀಕರಣಕ್ಕೆ 1 ಕೋಟಿಗೂ ಅಧಿಕ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.
ನಗರದ ವಾರ್ಡ್ ನಂ.13 ರ ಅರುಣ ಚಿತ್ರಮಂದಿರದಿಂದ ಗೌಡರ ಕಟ್ಟಿಗೆ ಅಡ್ಡೆವರೆಗೆ, ವಾರ್ಡ್ ನಂ.7 ಮತ್ತು 8 ರ ಪತ್ತಾರ ಅಂಗಡಿಯಿಂದ ಭಗತ್ ಸಿಂಗ್ ವೃತ್ತದವರೆಗೆ ಹಾಗು ರಾಜು ಮಟ್ಟಿಕಲ್ಲಿ ಮನೆಯಿಂದ ಕುಚನೂರ ಮನೆವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಸವದಿ ಅಧಿಕೃತವಾಗಿ ಚಾಲನೆ ಭೂಮಿಪೂಜೆ ನೆರವೇರಿಸಿದರು.
ಅವಳಿ ನಗರದಲ್ಲಿನ ರಸ್ತೆಗಳು ತೀರಾ ಹದಗೆಟ್ಟಿರುವದು ಅರಿವಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಳಚರಂಡಿ ಹಾಗು ನೀರು ಸರಬರಾಜು ಸಂಬಂಧ ರಸ್ತೆ ಅಗೆಯುವ ಕಾರ್ಯ ಅನಿವಾರ್ಯವಾಗಿದ್ದು ಜನತೆ ಸಹಕರಿಸಬೇಕೆಂದು ಸವದಿ ಮನವಿ ಮಾಡಿದರು.
ಇದೇ ಸಂದರ್ಭ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್,ಪಿ. ಶರಣಪ್ಪನವರ, ಧರೆಪ್ಪ ಉಳ್ಳಾಗಡ್ಡಿ, ಸಿದ್ಧನಗೌಡ ಪಾಟೀಲ, ಹೀರಾಚಂದ ಕಾಸರ, ರಾಜು ಬಾಣಕಾರ, ಶ್ರೀಶೈಲ ಬೀಳಗಿ, ಪ್ರಭಾಕರ ಮೊಳೇದ, ಗೋವಿಂದ ಡಾಗಾ, ಶ್ರೀಶೈಲ ಯಾದವಾಡ, ಶಾಂತು ಬಳಗಾರ, ಶೇಖರ ಜವಳಗಿ ಮಲ್ಲಪ್ಪ ಮೊಳೆಗಾಂವಿ, ಮನೋಹರ ಕೊಕಟನೂರ, ರೇವಪ್ಪ ಗುಣಕಿ ಸೇರಿದಂತೆ ಅನೇಕರಿದ್ದರು.

Social Plugin