ಬನಹಟ್ಟಿಯಲ್ಲಿ ಪ್ರಧಾನಿ ಮೋದಿಯವರ ಜನ್ಮದಿನ ಅಂಗವಾಗಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಸಿದ್ದು ಸವದಿ.

ವಿಶ್ವದಲ್ಲಿ ಶಿಕ್ಷಣ-ಆರೋಗ್ಯ ಉಚಿತವಾಗಿದೆ

ರಬಕವಿ-ಬನಹಟ್ಟಿ,ಸೆ17: ಹುಟ್ಟಿದ ಮನುಷ್ಯನಿಗೆ ಶಿಕ್ಷಣ ಹಾಗು ಆರೋಗ್ಯ ಕಡ್ಡಾಯವಾಗಿ ಉಚಿತವಾಗಿ ದೊರಕುವ ದೃಷ್ಟಿಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳೂ ಇವುಗಳಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಅದರಂತೆ ಭಾರತ ದೇಶವು ಬಡತನದಲ್ಲಿ, ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ ಶಿಕ್ಷಣ ಹಾಗು ಆರೋಗ್ಯ ದೃಷ್ಟಿಯಲ್ಲಿ ಅತಿಮುಖ್ಯ ಪ್ರಾಮುಖ್ಯತೆ ಪಡೆಯುವಲ್ಲಿ ಕಾರಣವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ನಗರದ ಭದ್ರನ್ನವರ ಸಮುದಾಯ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆಯಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವೈದ್ಯಕೀಯ ಸೇವೆ ಎಂದಿಗೂ ಆರ್ಥಿಕ ಲಾಭಕ್ಕಾಗಿ ಅಲ್ಲ ಬದಲಾಗಿ ಸೇವಾ ಮನೋಭಾವ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಕೆಲವರು ಖಾಸಗಿಯಾಗಿ ಬಂಡವಾಳಕ್ಕಾಗಿ ಆಸ್ಪತ್ರೆಗಳನ್ನು ತೆರೆಯುತ್ತಿರುವದು ವಿಷಾದವೆನಿಸುತ್ತದೆ. ಬರುವ ಅಧಿವೇಶನದಲ್ಲಿ ಪಕ್ಷಾತೀತವಾಗಿ ಸಕಲ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಆಸ್ಪತ್ರೆಗಳನ್ನು ಗ್ರಾಮೀಣಮಟ್ಟದವರೆಗೂ ಜಾರಿ ತರುವಲ್ಲಿ ಮಹತ್ವದ ನಿರ್ಧಾರಕ್ಕೆ ಒತ್ತಾಯಪಡಿಸುವದಲ್ಲದೆ ಮಹಾಮಾರಿ ಕೊರೊನಾ ಸಂಬಂಧಿತ ರೋಗಗಳಿಗೆ ಖರ್ಚು-ವೆಚ್ಚವಲ್ಲದೆ ಗುಣವಾಗುವಂತೆ ಯೋಜನೆ ರೂಪಿಸುವದಾಗಿ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಈಶ್ವರ ನಾಗರಾಳ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ರಾಜು ಅಂಬಲಿ, ಭೀಮಶಿ ಮಗದುಮ್, ಲಕ್ಕಪ್ಪ ಪಾಟೀಲ, ಆನಂದ ಕಂಪು, ವಿದ್ಯಾಧರ ಸವದಿ, ಸುವರ್ಣಾ ಕೊಪ್ಪದ, ಪವಿತ್ರಾ ತುಕ್ಕಣ್ಣವರ, ಈರಣ್ಣ ಅಂಗಡಿ, ಸೇರಿದಂತೆ ಅನೇಕರಿದ್ದರು.

ವರ್ಧಮಾನ ಕೋರಿ, ಈಶ್ವರ ಪಾಟೀಲ, ಕುಮಾರ ಕದಂ, ಶ್ರೀಶೈಲ ಬೀಳಗಿ, ಈಶ್ವರ ಕೋಲಾರ, ರಮೇಶ ಮಂಡಿ, ಅಶೋಕ ಹಳ್ಳೂರ, ಪಾಟೀಲ ಸೇರಿದಂತೆ ಅನೇಕರಿದ್ದರು.