ರಬಕವಿ-ಬನಹಟ್ಟಿ ತಹಶೀಲ್ಧಾರ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ವಿಶ್ವಕರ್ಮನು ಸೃಷ್ಟಕರ್ತ ಹಾಗು ದೈವಿಕ ವಾಸ್ತುಶಿಲ್ಪಿ

ರಬಕವಿ-ಬನಹಟ್ಟಿ,ಸೆ17: ವಿಶ್ವಕರ್ಮ ಪೂಜೆಯು ಹಿಂದೂಗಳ ಪವಿತ್ರ ಹಬ್ಬವಾಗಿದೆ. ವಿಶ್ವಕರ್ಮ ಪೂಜೆಯ ದಿನದಂದು ವಿಶ್ವಕರ್ಮನನ್ನು ಪೂಜಿಸುತ್ತಾರೆ. ಋಗ್ವೇದದ ಪ್ರಕಾರ, ವಿಶ್ವಕರ್ಮನು ಸೃಷ್ಟಕರ್ತ ಹಾಗು ದೈವಿಕ ವಾಸ್ತುಶಿಲ್ಪಿಯೆಂದು ಪರಿಗಣಿಸಲಾಗಿದೆ ಎಂದು ಬನಹಟ್ಟಿ ವಿಶ್ವಕರ್ಮ ಸಮಾಜದ ರಾಜು ಬಡಿಗೇರ ತಿಳಿಸಿದರು.

ತಹಶೀಲ್ದಾರ ಕಚೇರಿ ಆವರಣದೊಳಗೆ ಜರುಗಿದ ವಿಶ್ವಕರ್ಮ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವಕರ್ಮ ಪೂಜೆಯನ್ನೇ ವಿಶ್ವಕರ್ಮ ಜಯಂತಿಯೆಂದು ಆಚರಿಸಲಾಗುವದು. ವರ್ಷದ ಎರಡು ದಿನ ಆಚರಿಸುವ ಈ ಜಯಂತಿ ಕನ್ಯಾ ಸಂಕ್ರಾಂತಿ ದಿನದಂದು ಸೆಪ್ಟೆಂಬರ್ 16 ಮತ್ತು 17 ಹಾಗು ರಾಜಸ್ಥಾನ, ಗುಜರಾತ್ ಸೇರಿದಂತೆ ಇತರೆ ಭಾಗಗಳಲ್ಲಿ ಫೆಬ್ರುವರಿ 7 ರಂದು ಆಚರಿಸುತ್ತಾರೆ. ವಿಶ್ವಕರ್ಮನ ಜನ್ಮದಿನವನ್ನು ವಿಶ್ವಕರ್ಮ ಪೂಜೆ, ದಿವಸ್ ಅಥವಾ ಜಯಂತಿ ಎಂದು ಕರೆಯಲಾಗುವದು. ಅತ್ಯಂತ ಶುಭ ಹಾಗು ಸಮೃದ್ಧಿಯ ದಿನವೆಂದು ಪರಿಗಣಿಸುವಲ್ಲಿ ವಿಶ್ವಕರ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಭಗವಾನ್ ಬ್ರಹ್ಮನ 7ನೇ ಮಗನಾಗಿ ಜನಿಸಿದನು ಎಂಬ ನಂಬಿಕೆಯೂ ಇದೆ. ಎಂದರು.

ಉಪತಹಶೀಲ್ದಾರ ಎಸ್.ಎಲ್. ಕಾಗಿಯವರ, ಮೋಹನ ಪತ್ತಾರ, ರಾಮಚಂದ್ರ ಪತ್ತಾರ, ಗಣಪತಿ ಸುತಾರ, ಈರಣ್ಣ ಸುತಾರ, ರವೀಂದ್ರ ಪತ್ತಾರ, ಎಂ.ಎಸ್. ಸೋನಾರ, ಅರವಿಂದ ಪತ್ತಾರ, ಚಿದಾನಂದ ಪತ್ತಾರ, ಹಣಮಂತ ಪತ್ತಾರ ಸೇರಿದಂತೆ ಅನೇಕರಿದ್ದರು.