ರಬಕವಿ-ಬನಹಟ್ಟಿ ನಗರಸಭೆ ಗೋಡೆ ಮೇಲೆ ಸ್ವಚ್ಛತೆ ಬಗ್ಗೆ ಶಾಸಕ ಸಿದ್ದು ಸವದಿ ಚಿತ್ರದೊಂದಿಗೆ ಬರಹ ಮೂಡಿಸುತ್ತಿರುವದು.

ಸ್ವಚ್ಛತೆಗಾಗಿ ಎಲ್ಲರೂ ಜಾಗೃತಿಯಾಗಲಿ

ರಬಕವಿ-ಬನಹಟ್ಟಿ,ಸೆ17: ಸ್ವಚ್ಛತಾ ಅಭಿಯಾನಕ್ಕಾಗಿ ಎಲ್ಲರೂ ದಿನಂಪ್ರತಿ ಮನೆಯೊಂದಿಗೆ ಪರಿಸರ ಸ್ವಚ್ಛತೆಯಿಂದ ಜಾಗೃತರಾಗಿರಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.

ನಗರಸಭೆ ಮುಂಭಾಗದ ಗೋಡೆಯ ಮೇಲೆ ಸ್ವಚ್ಛ ಭಾರತ ಯೋಜನೆಯಡಿ ಗೋಡೆ ಬರಹ ಮೂಡಿಸುವ ಮೂಲಕ ಮಾತನಾಡಿದ ಅವರು, ರಬಕವಿ-ಬನಹಟ್ಟಿ ನಗರಸಭೆಯಾದ್ಯಂತ ಪ್ರಮುಖ ಸ್ಥಳಗಳಲ್ಲಿ 3.5 ಲಕ್ಷ ರೂ.ಗಳ ವೆಚ್ಚದಲ್ಲಿ ಗೋಡೆ ಹಾಗು ಬ್ಯಾನರ್ ಬರಹಗಳ ಮೂಲಕ ಸ್ವಚ್ಛತೆಗಾಗಿ ಜನಜಾಗೃತಿ ನಡೆಸಲಾಗುತ್ತಿದೆ ಎಂದರು.

ಕಸ ವಿಂಗಡಣೆಯನ್ನು ಹಸಿ ಹಾಗು ಒಣ ಕಸ ಪ್ರತ್ಯೇಕ ಮಾಡುವದು. ಶೌಚಾಲಯ ಸ್ವಚ್ಛ ಸೇರಿದಂತೆ ಸುತ್ತಲಿನ ಪರಿಸರವನ್ನು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಿದೆ ಎಂದು ಸವದಿ ಹೇಳಿದರು.

ಪೌರಾಯುಕ್ತ ಶ್ರೀನಿವಾಸ ಜಾಧವ, ವ್ಯವಸ್ಥಾಪಕ ಬಂದೇನವಾಜ್ ಡಾಂಗೆ, ರಾಜು ಅಂಬಲಿ, ಲಕ್ಕಪ್ಪ ಪಾಟೀಲ, ಶ್ರೀಶೈಲ ಬೀಳಗಿ, ಗುಡಿಮನಿ, ಎಸ್.ಎಲ್. ಚೌಡಕಿ ಸೇರಿದಂತೆ ಅನೇಕರಿದ್ದರು.