ತೇರದಾಳ ಸಮೀಪದ ತಮದಡ್ಡಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ ಶಂಕರ ಅಥಣಿ 

ಜಿಲ್ಲಾ ಮಟ್ಟದ ಪ್ರೌಢಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ
ತೇರದಾಳ : ಇಲ್ಲಿಗೆ ಸಮೀಪದ ತಮದಡ್ಡಿ ಗ್ರಾಮದ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ ಶಂಕರ ಅಥಣಿ ಇವರು ಜಿಲ್ಲಾ ಮಟ್ಟದ ಪ್ರೌಢಶಾಲೆಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
   ಪ್ರಕಾಶ ಅಥಣಿ ಶಿಕ್ಷಕರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸರಕಾರಿ ಗಂಡು ಮಕ್ಕಳ ಶಾಲೆ ಬನಹಟ್ಟಿಯಲ್ಲಿ ಮತ್ತು ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಎಸ್‍ಆರ್‍ಎ ಬನಹಟ್ಟಿಯಲ್ಲಿ ಮುಗಿಸಿದ್ದಾರೆ. ಇವರು ಜಮಖಂಡಿಯ ಸಿಟಿಇ ಕಾಲೇಜಿನಲ್ಲಿ ಬಿಇಡಿ ತರಬೇತಿಯನ್ನು ಪೂರ್ಣಗೊಳಿಸಿ 2003 ರಿಂದ 2007 ವರೆಗೆ ಖಾಸಗಿ ಪ್ರೌಢಶಾಲೆ ಪೂರ್ಣಪ್ರಜ್ಞೆ ಆಂಗ್ಲ ಮಾಧ್ಯಮ ಶಾಲೆ ರಾಮಪೂರದಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. 2007 ಜು. ತಿಂಗಳಲ್ಲಿ ಇವರು ಸರಕಾರಿ ಪ್ರೌಢಶಾಲೆಗೆ ಆಂಗ್ಲ ಶಿಕ್ಷಕರಾಗಿ ಆಯ್ಕೆಯಾದರು. 
    ಇವರ ಸರಕಾರಿ ಶಾಲೆಯಲ್ಲಿ ಸೇವೆಯು ಬೀಳಗಿ ತಾಲೂಕಿನ (ಪು.ಕೇ)ಸರಕಾರಿ ಪ್ರೌಢಶಾಲೆ ಕೋಲೂರಿನಲ್ಲಿ 2007ರಿಂದ ಪ್ರಾರಂಭವಾಯಿತು. ಈ ಶಾಲೆಯಲ್ಲಿ ಸತತ 6ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಶೇ.100 ಫಲಿತಾಂಶ ಬಂದಿತು. ಇವರು 2007ರಿಂದ 2013ರ ವರೆಗೆ ಕೋಲೂರು ಸರಕಾರಿ ಪ್ರೌಢಶಾಲೆಯಲ್ಲಿ ಸೇವೆಯನ್ನು ಸಲ್ಲಿಸಿದರು. ನಂತರ ಇವರು 2013ರಲ್ಲಿ ವರ್ಗಾವಣೆಗೊಂಡು ಜಮಖಂಡಿ ತಾಲೂಕಿನ ತಮದಡ್ಡಿಯ ಸರಕಾರಿ ಪ್ರೌಢಶಾಲೆ ಬಂದರು ಇಲ್ಲಿ ಮೂರು ಬಾರಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಂಗ್ಲೀಷ ವಿಷಯದಲ್ಲಿ ಶೇ.100ರಷ್ಟು ಫಲಿತಾಂಶವನ್ನು ಪಡೆದರು. ಒಟ್ಟಾರೆಯಾಗಿ ಇವರು 13ವರ್ಷಗಳವರೆಗೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಜಿಲ್ಲಾ ಮಟ್ಟದ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಸೇವೆಯನ್ನು ಇಲಾಖೆಯು ಗುರುತಿಸಿ ಇವರಿಗೆ ಈ ವರ್ಷದ ಪ್ರೌಢಶಾಲಾ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡುತ್ತಿದೆ.