ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿ ತೀರದ ಬ್ಯಾರೇಜ್ ಪಕ್ಕದಲ್ಲಿ ಬಲೆಯಿಂದ ಸಂಗ್ರಹಿಸಿದ ಮೀನಿಗಳನ್ನು ಹೋಲ್‍ಸೇಲ್ ವ್ಯಾಪಾರಿಗಳು ಸ್ಥಳದಲ್ಲಿಯೇ ಖರಿದಿಸುತ್ತಿರುವುದು. 

ಲಾಕ್‍ಡೌನ್ ನಂತರ ನದಿ ದಡದಲ್ಲಿ ಮೀನು ಮಾರಾಟ ಜೋರು; ಮಿನುಗಾರರು ಖುಷ್
-ಮಲ್ಲಿಕಾರ್ಜುನ ತುಂಗಳ
ರಬಕವಿ-ಬನಹಟ್ಟಿ,ಸೆ4: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕಳೆದ ತಿಂಗಳಿಂದ ಸಮೀಪದ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಈಗ ಅದರ ಹರಿವಿನ ಅಬ್ಬರ ನಿಧಾನವಾಗಿ ಇಳಿಮುಖವಾಗಿದ್ದರಿಂದ ನದಿ ಪಾತ್ರದಲ್ಲಿ ಮೀನುಗಾರರು ಮೀನು ಹಿಡಿಯುವುದರಲ್ಲಿ ತುಂಬಾ ಬೀಜಿಯಾಗಿ ಖುಷ್ ಆಗಿದ್ದಾರೆ.
ಈ ಮೊದಲು ನದಿಯಲ್ಲಿ ಬಲೆಹಾಕಿ ಸಂಜೆಯವರೆಗೂ ಮಿನುಗಳನ್ನು ಹಿಡಿದು ಸಂಗ್ರಹಿಸಿಕೊಂಡು ರಬಕವಿ ಬನಹಟ್ಟಿ ಮೀನು ಮಾರುಕಟ್ಟೆಯಲ್ಲಿ ತಂದು ಮಾರಾಟಮಾಡುತ್ತಾ ಕುಳಿತುಕೊಳ್ಳುವ ವಾತಾವರಣವಿತ್ತು. ಆದರೆ ಈ ಬಾರಿ ಲಾಕ್‍ಡೌನ್ ಓಪನ ಆದ ಬಳಿಕ ಮಿನುಗಳಿಗೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳಿಯ ಮೀನುಗಾರರು. ಹೋಲ್‍ಸೇಲ್ ಮೀನು ಖರೀದಿದಾರರು ನೇರವಾಗಿ ನದಿ ಪಾತ್ರದಲ್ಲಿರುವ ಮೀನುಗಾರರ ಹತ್ತಿರ ಹೋಗಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ಮಿನುಗಾರರು ಫುಲ್ ಖುಷ ಆಗಿದ್ದಾರೆ.
ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಓಳ ಹರಿವು ಮಾತ್ರ ರಭಸವಾಗಿ ಹರಿಯುತ್ತಿದ್ದ ಸಂದರ್ಭದಲ್ಲಿ ಕೆಲವೇ ಕೆಲವು ಜಾತಿಯ ಮೀನುಗಳ ತಂಡ ಭಹಳ ದೂರಿನಿಂದ ನೀರಿನ ವಿರುದ್ದ ದಿಕ್ಕಿನಲ್ಲಿ ಈಜುತ್ತಾ ಸಾಗುತ್ತಾ ತಂಡ ತಂಡವಾಗಿ ಬರುತ್ತಿರುತ್ತವೆ. ಅದನ್ನೇ ಕಾಯುತ್ತಾ ಕುಳಿತು ನೋಡುತ್ತಿರುವ ಮೀನುಗಾರ ಹರಿವ ಕೆಂಪು ನೀರಿನ ಆಯ್ದ ಕೆಲವು ಸ್ಥಳಗಳಲ್ಲಿ ಅಥವಾ ಬ್ಯಾರ್‍ಜ ಕಟ್ಟದ ಗೋಡೆಯ ಇಳಿಜಾರಿನಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಕಪ್ಪಾಗಿ ಕಾಣಸಿಗುಸುತ್ತದೆ. ಅಲ್ಲಿ ಮೀನುಗಳ ತಂಡವೇ ಸಂಗ್ರವಾಗಿ ಮಾರ್ಗ ಬದಲಾಯಿಸು ಸಮಯ ನೋಡುತ್ತಿರುತ್ತವೆ. ಈದೆ ಸೂಕ್ತ ಸಮಯವೆಂದು ಗಂಟೆಗಂಟಲೆ ಕಾಯುತ್ತ ಕುಳಿತ ಮೀನುಗಾರ ತಕ್ಷಣ ದೊಡ್ಡ ಬಲೆಯೊಂದನ್ನು ಬೀಸುತ್ತಾರೆ. ಆಗ ಒಂದೇಸರದಿಗೆ 5 ರಿಂದ 10 ಕೇಜಿ ಮೀನುಗಳು ಬಲೆಯಲ್ಲಿ ದೊರಕುತ್ತವೆ ಎನ್ನುತ್ತಾರೆ ರಬಕವಿ ಮೀನುಗಾರ ಮಹಾದೇವ ಶೆಟ್ಟಪ್ಪನವರ.
`ಈ ಮೊದಲು ಮಾರುಕಟ್ಟೆಯಲ್ಲಿ  ಕೃಷ್ಣಾ ನದಿಯಲ್ಲಿ ದೊರೆತ ಈ ಚಿಕ್ಕಚಿಕ್ಕ ಮೀನುಗಳ ದರ ಪ್ರತಿ ಕೆಜಿಗೆ 300 ಇತ್ತು, ಈಗ ಪ್ರತಿ ಕೆಜಿಗೆ 6 ನೂರು ದರವಾಗಿದೆ. ತಾವು ಸಂಗ್ರಹಿಸಿದ ಮೀನುಗಳನ್ನು ಮಾರುಕಟ್ಟೆಗೆ ತಂದು ಮಾರುವಷ್ಟರಲ್ಲಿ ಕೆಲವು ಹೋಲಸೇಲ್ ಮಾರಾಟಗಾರರಿಗೆ ದೊರಕುವುದಿಲ್ಲ. ಆದ್ದರಿಂದ ನಾವೇ ನೇರವಾಗಿ ಮೀನುಗಾರರು ಇದ್ದಲ್ಲಿಗೆ ಹುಡಿಕಿಕೊಂಡು ಹೋಗಿ ಖರೀದಿಸಿಕೊಂಡು ಬಂದು ಮಾರಾಟಮಾಡುತ್ತೇವೆ.’---- ಇಸ್ಮೈಲ್ ಬಂದೇನಮಾಜ...ರಾಂಪುರ. ಮೀನು ಮಾರಾಟಗಾರರು.