ತೇರದಾಳ ಸಮೀಪದ ಎಚ್‍ಪಿಎಸ್ ಸಸಾಲಟ್ಟಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾಧರ ಚಂದ್ರಯ್ಯ ಹಿರೇಮಠ

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ
ತೇರದಾಳ : ಇಲ್ಲಿಗೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಸಾಲಟ್ಟಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವಿದ್ಯಾಧರ ಚಂದ್ರಯ್ಯ ಹಿರೇಮಠ ಇವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
   ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಮುಗಳಖೋಡ ಹಾಗೂ ಪ್ರೌಢಶಾಲೆಯನ್ನು ಬಿಎನ್‍ಕೆ ಪಿಯು ಕಾಲೇಜ್ ಮುಗಳಖೋಡದಲ್ಲಿ ಮುಗಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಎಸ್‍ವ್ಹಿಎಸ್ ಹಾರೂಗೇರಿಯಲ್ಲಿ ಪಿಯು ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಬೆಳಗಾವಿಯ ಎಸ್‍ವ್ಹಿಇಎಸ್ ಕಾಲೇಜಿನಲ್ಲಿ ಟಿಸಿಎಚ್ ತರಬೇತಿಯನ್ನು ಮುಗಿಸಿದ್ದಾರೆ. ಬಿಎ ಮತ್ತು ಎಮ್‍ಎ ಶಿಕ್ಷಣವನ್ನು ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪಡೆದುಕೊಂಡು ಬಿಎಡ್ ತರಬೇತಿಯನ್ನು ಸಹ ಇವರು ಮುಗಿಸಿಕೊಂಡಿದ್ದಾರೆ. ಇವರು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಟಿಸಿಎಚ್ ತರಬೇತಿಯಲ್ಲಿಯು ಸಹ ಉತ್ತಮ ವಿದ್ಯಾರ್ಥಿ ಎಂದು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
   ಗವಿಮಠ ಪ್ರತಿಷ್ಟಾನ ಮಧುರಖಂಡಿ(ಕನ್ನಡ ಸಾಹಿತ್ಯ ಮರಿಷತ್ತು ಬಾಗಲಕೋಟ) ಇವರಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದರು. ಇವರು 2002 ಆಗಷ್ಟದಿಂದ 2015 ಸೆಪ್ಟಂಬರ್ 9ರವರೆಗೆ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಗೋಲಭಾವಿ ತೋಟ ನಂ-2ರಲ್ಲಿ ಸೇವೆ ಸಲ್ಲಿಸಿ 2015 ಸೆಪ್ಟಂಬರ್ 10ರಿಂದ ಇವತ್ತಿನವರೆಗೆ ಸಸಾಲಟ್ಟಿ ಸಲಬನ್ನವರ ವಸ್ತಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 18 ವರ್ಷಗಳ ಕಾಲ ಗ್ರಾಮೀಣ ಭಾಗದ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೌಲ್ಯಾಂಕನದಲ್ಲಿ ಸತತ ಮೂರು ಬಾರಿ ಕ್ಲಷ್ಟರ್‍ಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು ತಾಲೂಕಾ ಮಟ್ಟದಲ್ಲಿ ಸನ್ಮಾನಿಸಿ ಪ್ರಶಸ್ತಿ ಪತ್ರವನ್ನು ನೀಡಿದ್ದಾರೆ. ಅಂಗನವಾಡಿಗೆ ಬಂದಿದ್ದ ಮಗು ಆಡುತ್ತಾ ಕೆನಾಲ್‍ದಲ್ಲಿ ಬಿದ್ದದ್ದನ್ನು ಕಂಡು ಕೆನಾಲ್‍ಗೆ ಧುಮುಕುವ ಮೂಲಕ ಆ ಮಗುವಿನ ರಕ್ಷಣೆ ಮಾಡುವುದರ ಮೂಲಕ ವಸತಿ ಪ್ರದೇಶದಲ್ಲಿನ ಜನರಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾಮಾರಿ ಕೊವಿಡ್-19ದ ಕ್ವಾರಂಟೈನ್ ಕೇಂದ್ರದ ಸಮರ್ಥ ನಿರ್ವಹಣೆ ಹಾಗೂ ಜನರಲ್ಲಿ ಜಾಗೃತೆಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಸಮಾಜದಲ್ಲಿನ ಹಾಗೂ ಶಾಲಾ ಆವರಣದಲ್ಲಿನ ಇವರ ಸೇವೆಯನ್ನು ಇಲಾಖೆ ಗುರುತಿಸಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿದೆ.