ಬನಹಟ್ಟಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಅಪಾರ ಪ್ರಮಾಣ ನೀರು ಹರಿಯಿತು.
ಬನಹಟ್ಟಿ: ಭಾರಿ ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ನೀರು
ರಬಕವಿ-ಬನಹಟ್ಟಿ : ಬುಧವಾರ ಮಧ್ಯಾಹ್ನ ಒಂದು ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಸ್ಥಳೀಯ ಅರುಣ ಟಾಕೀಸ್ ಪಕ್ಕದ ಮತ್ತು ಯಾದವಾಡ ಲೇನ್ದ ಅನೇಕ ಮನೆಗಳಿಗೆ ನೀರು ನುಗ್ಗಿತು.
ಸ್ಥಳೀಯ ಮಂಗಳವಾರ ಪೇಟೆಯ ಪ್ರಮುಖ ರಸ್ತೆಯ ಮೇಲೆ ನೀರು ಹಳ್ಳದಂತೆ ಹರಿಯಿತು. ಸುತ್ತ ಮುತ್ತಲಿನ ಗುಡ್ಡ ಪ್ರದೇಶದ ನೀರು ಮಂಗಳವಾರ ಪೇಟೆಯ ಪ್ರಮುಖ ರಸ್ತೆಗೆ ಹರಿದು ಬರುತ್ತಿರುವುದರಿಂದ ಈ ರಸ್ತೆಯ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತದೆ.
ಸ್ಥಳೀಯ ಅರುಣ ಟಾಕೀಸ್ ಹತ್ತಿರ ಮಳೆಯ ನೀರು ಚರಂಡಿ ಸೇರಲು ಯಾವುದೆ ಮಾರ್ಗ ಇಲ್ಲದೆ ಇರುವುದರಿಂದ ಅಪಾರ ಪ್ರಮಾಣ ನೀರು ಸಂಗ್ರಹಗೊಂಡು ಮನೆಗಳಿಗೆ ನುಗ್ಗಿತು.
Social Plugin