ಬನಹಟ್ಟಿ  ನಗರದ ಪಶು ಆಸ್ಪತ್ರೆಯಲ್ಲಿ 2018-19ನೇ ಸಾಲಿನ ಆರ್. ಕೆ. ವಿ.ವೈ ಯೋಜನೆಯಲ್ಲಿ ಪಶುವೈದ್ಯ ಆಸ್ಪತ್ರೆಯ 21.12ಲಕ್ಷ ವೆಚ್ಚದ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದ ಶಾಸಕ ಸಿದ್ದು ಸವದಿ 


ಪಶು ಆಸ್ಪತ್ರೆಯ 21.12ಲಕ್ಷ ವೆಚ್ಚದ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ 

ರಬಕವಿ-ಬನಹಟ್ಟಿ : ಕೋವಿಡ್-19 ನಂತಹ ಕಷ್ಟದ ಪರಸ್ಥಿತಿಯಲ್ಲಿಯೂ ಸರಕಾರ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಅವರು ನಗರದ ಬಸ್ ನಿಲ್ದಾಣದ ಹತ್ತಿರವಿರುವ ಪಶು ಆಸ್ಪತ್ರೆಯಲ್ಲಿ 2018-19ನೇ ಸಾಲಿನ ಆರ್. ಕೆ. ವಿ.ವೈ ಯೋಜನೆಯಲ್ಲಿ ಪಶುವೈದ್ಯ ಆಸ್ಪತ್ರೆಯ 21.12ಲಕ್ಷ ವೆಚ್ಚದ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ರೈತರಂತೆ ನೇಕಾರರಿಗೂ ಸರಳವಾಗಿ ಸಾಲ ಸಿಗುವಂತೆ ಮಾಡುತ್ತೇನೆ. ರೈತರಂತೆ ನೇಕಾರರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿ ಹಾಗೂ ಸದಸನದ ಗಮನ ಸೆಳೆಯುತ್ತೇನೆ ಎಂದರು. 
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ, ರಮೇಶ ಮಂಡಿ, ಕುಮಾರ ಕದಂ, ಶ್ರೀಶೈಲ ಬೀಳಗಿ, ಈರಣ್ಣ ಚಿಂಚಖಂಡಿ, ಭೀಮಸಿ ಹಂದಿಗುಂದ, ಪರಪ್ಪ ಬೆಳಗಲಿ, ಪಶುವೈದ್ಯಾಧಿಕಾರಿ ವಾಯ್. ಎಸ್. ಕನ್ನೂರ, ಲಕ್ಷ್ಮಣ ಚನಾಳ ಸೇರಿದಂತೆ ಅನೇಕರು ಇದ್ದರು.