1) ಬನಹಟ್ಟಿ ಕಾಡಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿನ ಕುಸ್ತಿ ಮೈದಾನಕ್ಕೆ ಬಾಲಕ ಮಹದೇವಪ್ಪ ರಾಜೇಂದ್ರ ಭದ್ರನ್ನವರ ಮೈದಾನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಾಜೇಂದ್ರ ಭದ್ರನ್ನವರ, ಶ್ರೀಶೈಲಪ್ಪ ದಬಾಡಿ ಇದ್ದರು.
ಸಾಂಕೇತಿಕವಾಗಿ ಬನಹಟ್ಟಿ ಕಾಡಿಸಿದ್ಧೇಶ್ವರ ಜಾತ್ರೆಯ ಕುಸ್ತಿಗೆ ಚಾಲನೆ
ರಬಕವಿ-ಬನಹಟ್ಟಿ,ಸೆ10: ಸಾವಿರಾರು ಜನರು ಅತಿ ಕುತುಹಲದಿಂದ ನೋಡುವ ಬನಹಟ್ಟಿ ಕಾಡಸಿದ್ದೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಳ್ಳುವ ಕುಸ್ತಿ ಪಂದಾವಳಿ ಕೊರೊನಾ ನಿಮಿತ್ತ ರದ್ದಾದ ಕಾರಣ ಬುಧುವಾರ ಸಂಜೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ನಗರದ ಬದ್ರನ್ನವರ ಮನೆತನದ ಮೂರನೇ ತಲೆಮಾರಿನ ಬಾಲಕ ಮಹದೇವಪ್ಪ ರಾಜೇಂದ್ರ ಭದ್ರನ್ನವರ ಮೈದಾನಕ್ಕೆ ಚಾಲನೆ ನೀಡಿದರು. ಸಾಂಕೇತಿಕವಾಗಿ ಹತ್ತು ಬಾಲಕರನ್ನು ಕುಸ್ತಿ ಆಡಿಸಿ ಸಂಪ್ರದಾಯ ಮುರಿಯಬಾರೆಂಬ ಸದುದ್ದೇಶದಿಂದ ಸರ್ಕಾರಿ ನಿಯಮಗಳನ್ನು ಪಾಲಿಸಲಾಯಿತು.
ಈ ಸಂದರ್ಭದಲ್ಲಿ ರಾಜೇಂದ್ರ ಭದ್ರಣ್ಣವರ, ಶ್ರೀನಿವಾಸ್ ಭದ್ರಣ್ಣವರ ಮಂಗಳವಾರ ಪೇಟೆ ದೈವ ಮಂಡಳಿ ಚೇರ್ಮನ್ ಶ್ರೀಶೈಲ ದಬಾಡಿ, ಅಧ್ಯಕ್ಷರಾದ ಶೇಖರ್ ಮಾಲಾಪುರ, ಚನ್ನವೀರಪ್ಪ ಹಾದಿಮನಿ, ಕಾಡಪ್ಪ ಜಿಡ್ಡಿಮನಿ, ದಾವಲ್‍ಸಾಬ ಆಸಂಗಿ, ಮಲ್ಲಪ್ಪ ಗೌಡಪ್ಪನವರ, ದಾನಪ್ಪ ಹುಲಜತ್ತಿ, ಶ್ರೀನಿವಾಸ್ ಹಳ್ಯಾಳ, ಮಹಾಂತೇಶ್ ಭಂಗಿ, ಮಲ್ಲಪ್ಪ ಹಂದಿಗುಂದ, ಜಯವಂತ ಮಿಳ್ಳಿ ಸೇರಿದಂತೆ ಅನೇಕರಿದ್ದರು

Social Plugin