ಬನಹಟ್ಟಿಯಲ್ಲಿ ಜರುಗಿದ ಇಂಚಗೇರಿ ಸಂಪ್ರದಾಯದ ಸ.ಸ. ಹಣಮಂತಪ್ಪ ಚನಾಳ ಮಹಾರಾಜರ ಪುಣ್ಯಾರಾಧನೆಯಲ್ಲಿ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.
ಸಂತ-ಮಹಾಂತರಿಗೆ ಸಾವಿನ ಭಯವಿರುವದಿಲ್ಲ-ಚೌಡಯ್ಯಶ್ರೀ
ರಬಕವಿ-ಬನಹಟ್ಟಿ,ಸೆ12: ಸಂತ-ಶರಣರು ಮರಣವನ್ನು ಮಹಾನವಮಿಯನ್ನಾಗಿ ಆಚರಿಸಿದವರು. ಶರೀರ ಬರುತ್ತದೆ ಹೋಗುತ್ತದೆ ಆದರೆ ಭಗವಂತನ ಸ್ಮರಣೆ ಮಾತ್ರ ನಿರಂತರವಾಗಿರುತ್ತದೆ. ಶರಣರು ಸದ್ಯೋನ್ಮುಕ್ತರು, ಸಂತ-ಮಹಾಂತರಿಗೆ ಎಂದಿಗೂ ಸಾವಿನ ಭಯವಿರುವದಿಲ್ಲವೆಂದು ಹಾವೇರಿ ಜಿಲ್ಲೆಯ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಹೇಳಿದರು.
ಬನಹಟ್ಟಿಯಲ್ಲಿ ಜರುಗಿದ ಇಂಚಗೇರಿ ಸಂಪ್ರದಾಯದ ಸ.ಸ. ಹಣಮಂತಪ್ಪ ಚನಾಳ ಅವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಸತ್ಸಂಗದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಗವಂತನ ಇಚ್ಛೇಯಂತೆ ಬದುಕಬೇಕು. ಪರೋಪಕಾರಿ ಜೀವನದಿಂದ ಮುಕ್ತಿ ಸಾಧ್ಯ. ಸದಾಕಾಲ ಸತ್ಸಂಗ, ಪ್ರವಚನಗಳಲ್ಲಿ ತೊಡಗುವದರೊಂದಿಗೆ ಹರಿದ ನೀರಿನಂತೆ ಮನಸ್ಸು ನಿಷ್ಕಲ್ಮಶವಾಗುವದೆಂದರು.
ಕಾರ್ಯಕ್ರಮದಲ್ಲಿ ಕಲ್ಲಪ್ಪ ಕಡಬಲ್ಲನವರ ಮಹಾರಾಜರು, ಗಿರಮಲ್ಲಪ್ಪ ಮಹಾರಾಜರು, ಸತ್ಯಪ್ಪ ಮಹಾರಾಜರು, ಯಲ್ಲಪ್ಪ ಮಹಾರಾಜರು, ಮಹಾಂತ ಶರಣರು, ರವಿ ಗೆದ್ದಪ್ಪನವರ, ಪಾಂಡುರಂಗ ಚನಾಳ, ಬಸವಂತಪ್ಪ ಬಾಣಕಾರ, ಶ್ರೀಶೈಲ ಮಡಿವಾಳರ, ಮಲ್ಲಪ್ಪ ಚಿಪ್ಪಾಡಿ, ಶಿವಾನಂದ ಕೊಳಕಿ, ಅಶೋಕ ಚನಾಳ, ಲೋಕೇಶ ಪೂಜಾರಿ, ಮಹೇಶ ಪೂಜಾರಿ, ಮಹೇಶ ಚನಪನ್ನವರ, ಕಲ್ಲವ್ವ ಸನದಿ, ರಂಗಾ ಗೋಂದಕರ ಸೇರಿದಂತೆ ಅನೇಕರಿದ್ದರು.
Social Plugin