ಬನಹಟ್ಟಿಯ್ಲಿ ನಲಿ-ಕಲಿ ಸಮಗ್ರ ಹಾಗೂ 6 ರಿಂದ 8 ನೇ ತರಗತಿ ವಿಷಯಾಧಾರಿತ ತರಬೇತಿ ಕಾರ್ಯಕ್ರಮದಲ್ಲಿ ಸಿಆರ್‍ಪಿ ಪ್ರಶಾಂತ ಹೊಸಮನಿ ನೋಡಲ್ ಅಧಿಕಾರಿಗಳಾಗಿ ಮಾತನಾಡಿದರು. 
ತರಬೇತಿಯಲ್ಲಿ ಪಡೆದ ಜ್ಞಾನ ವರ್ಗದ ಕೋಣೆ ತಲುಪಲಿ
ರಬಕವಿ-ಬನಹಟ್ಟಿ,ಸೆ10:ತರಬೇತಿಯಲ್ಲಿ ಪಡೆದ ಜ್ಞಾನ ವರ್ಗದ ಕೋಣೆ ತಲುಪುವಂತಾಗಬೇಕು ಎಂದು ಸಿಆರ್‍ಪಿ ಜಿ.ಆಯ್. ಹತ್ತಳ್ಳಿ ಹೇಳಿದರು.
ನಗರದ ಕೆಎಚ್‍ಡಿಸಿ ಕಾಲನಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬನಹಟ್ಟಿ ಪೂರ್ವ, ಪಶ್ಚಿಮ, ಹಿಪ್ಪರಗಿ ವಲಯದ ಗುರುಗಳಿಗಾಗಿ ಹಮ್ಮಿಕೊಂಡ ನಲಿಕಲಿ ಸಮಗ್ರ ಹಾಗೂ 6 ರಿಂದ 8 ನೇ ತರಗತಿ ವಿಷಯಾಧಾರಿತ ತರಬೇತಿ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾಗಿ ಮಾತನಾಡಿದರು. ತರಬೇತಿಗಳು ಬೋಧನೆಗೆ ಸಹಕಾರಿಯಾಗಲಿವೆ ಎಂದರು.
ಸಿಆರ್‍ಪಿ ಪ್ರಶಾಂತ ಹೊಸಮನಿ ಮಾತನಾಡಿ ಬೋಧನಾ ಸಂದರ್ಬದಲ್ಲಿ ಆಗುವ ಕ್ಲಿಷ್ಟ ವಿಷಯಗಳನ್ನು ಸರಳೀಕರಣ ಮಾಡಿಕೊಳ್ಳಲು ತರಬೇತಿ ನೆರವಾಗುವುದು ಎಂದರು.