ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಉಪತಹಶೀಲ್ದಾರ ಬಸವರಾಜ ಬಿಜ್ಜರಗಿ ಅವರಿಗೆ ಮನವಿ ಅರ್ಪಿಸಿದರು. 
ಡ್ರಗ್ಸ್ ಜಿಹಾದ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಶ್ರೀರಾಮ ಸೇನೆ ಮನವಿ
ರಬಕವಿ-ಬನಹಟ್ಟಿ : ಡ್ರಗ್ಸ್ ಜಿಹಾದ್ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳುವಂತೆ ಆಗ್ರಹಿಸಿ ರಬಕವಿ-ಬನಹಟ್ಟಿಯ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮನವಿ ಅರ್ಪಿಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನಪ್ಪ ಕೋರಿ, ಸಭ್ಯ, ಸಾಂಸ್ಕøತಿಕ ನಮ್ಮ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಡ್ರಗ್ಸ್ ಜಿಹಾದನ ಅಂತರರಾಷ್ಟ್ರೀಯ ಜಾಲ ವ್ಯಾಪಕವಾಗಿ ಹರಡಿ ರಾಜ್ಯದ ಘನತೆಗೆ, ಯುವ ಜನಾಂಗಕ್ಕೆ ಶಾಪವಾಗಿ ಪರಿಣಮಿಸಿದ್ದು, ದೇಶಕ್ಕೆ ಕಂಟಕವಾಗಿದೆ. ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಗ್ರ ಕ್ರಮಕ್ಕೆ ಮಂದಾಗಲು ಆಗ್ರಹಿಸುತ್ತೇವೆ. ನಮ್ಮ ಸಂಘಟನೆ ಈ ಮಾಫಿಯಾ ವಿರುದ್ಧ ಹೋರಾಡಲು ತಮಗೆ ಸಂಪೂರ್ಣ ಸಹಕಾರ ನೀಡುತ್ತದೆ. ಅಲ್ಲದೇ ಡ್ರಗ್ಸ್ ಮಾರಾಟ ಹಾಗೂ ಸಾಗಾಟ ಮಾಡುವವನ್ನು ರಾಷ್‍ಟರೀಯ ಸುರಕ್ಷಾ ಕಾಯಿದೆಯಲ್ಲಿ ಭಮಧಿಸಬೇಕು. ಶಾಲಾ ಕಾಲೇಜುಗಳ ಪರಿಸರದಲ್ಲಿ ಗುಪ್ತಚರ ಇಲಾಖೆಯ ಗಸ್ತು ಹೆಚ್ಚಿಸಬೇಕು. ಯಾವ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಡ್ರಗ್ಸ್ ಪತ್ತೆಯಾಗುತ್ತೋ ಆ ಠಾಣಾಧಿಕಾರಿಗಳನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾಋಇಗಳನ್ನು ಜವಾಬ್ದಾರರನ್ನು ಮಾಡಲು ಒತ್ತಾಯಿಸುತ್ತೇವೆ. ಪಬ್, ಕ್ಲಬ್, ಲೈವ್ ಬ್ಯಾಂಡ, ಸ್ಟಾರ್ ಹೊಟೇಲ್‍ನಂತಹ ಮುಖ್ಯ ಸ್ಥಳಗಳಲ್ಲಿ ನಿರಂತರ ತನಿಖೆ ನಡೆಸಬೇಕು. ಕೆಲವು ರಾಜಕಾರಣಿಗಳು, ದೊಡ್ಡ ದೊಡ್ಡ ಉದ್ದಿಮೆದಾರರು, ಪಕ್ಷಗಳಿಗೆ ದೇಣಿಗೆ ನೀಡುವ ಕುಳಗಳು ಈ ದಂಧೆಯ ಹಿಂದೆ ಒರುವುದರ ಬಗ್ಗೆ ತನಿಖೆ ನಡೆಸಬೇಕು. ಚಿತ್ರರಂಗದಲ್ಲಿಯೂ ಜಾಲ ಪಸರಿಸಿದ್ದು ಅದರ ಬಗ್ಗೆಯೂ ವ್ಯಾಪಕ ತನಿಖೆಗೆ ತಂಡ ರಚಿಸಬೇಕು. ಒಟ್ಟಾರೆ ಈ ಭಯಾನಕ ಜಾಲವನ್ನು ಭೇದಿಸಿ ರಾಜ್ಯದ ಜನತೆ ನೆಮ್ಮದಿಯಿಂದ ಇರುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಉಪತಹಶೀಲ್ದಾರ ಬಸವರಾಜ ಬಿಜ್ಜರಗಿ ಅವರಿಗೆ ಮನವಿ ಅರ್ಪಿಸಿದರು. 
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರದೀಪ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಸತೀಶ ರೇವನಿ, ಸಾಗರ ತುಂಗಳ, ಸಂಜು ರಾಔಳ, ಸದಾಶಿವ ಮುತ್ತೂರ, ಕುಮಾರ ಹಿರೇಮಠ, ಆಕಾಶ ಮಳಗಲಿ, ಆಕಾಶ ಯಳಸಂಗ, ಮಾಂತು ಚಿನಗುಂಡಿ, ಅಭಿಷೇಕ ಬೀಳಗಿ, ಸಾಗರ ಸನದಿ, ವಿಜಯ ಸಬಕಾಳೆ ಸೇರಿದಂತೆ ಅನೇಕರು ಇದ್ದರು.