ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಹಳ್ಳಕ್ಕೆ ನಿರ್ಮಾಣ ಮಾಡಲಾದ ಬಾಂದಾರ ತುಂಬಿರುವುದು.
ಮಳೆಯಿಂದಾಗಿ ತುಂಬಿದ ಬಾಂದಾರಗಳು
ರಬಕವಿ-ಬನಹಟ್ಟಿ,ಸೆ10: ರಬಕವಿ ಬನಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಸುತ್ತ ಮುತ್ತಲಿನ ಬಾಂದಾರಗಳು ತುಂಬಿ ಹರಿಯುತ್ತಿವೆ.
ಬನಹಟ್ಟಿ ಹಳ್ಳಕ್ಕೆ ನಿರ್ಮಾಣ ಮಾಡಲಾದ ಬಾಂದಾರ ತುಂಬಿ ಹರಿಯುತ್ತಿದೆ. ಬಾಂದಾರ ತುಂಬಿರುವುದರಿಂದ ಸುತ್ತ ಮುತ್ತಲಿನ ಹೊಲ ತೋಟಗಳಲ್ಲಿರುವ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅಂತರಜಲ ಮಟ್ಟ ಹಚ್ಚಿದೆ ಎಂದು ರೈತರಾದ ಅಪ್ಪು ಪಾಟೀಲ ಮತ್ತು ಸಿದ್ದು ಗೌಡಪ್ಪನವರ ತಿಳಿಸಿದರು.

Social Plugin