ಪಿಂಚಣಿದಾರರೇ ಕೂಡಲೇ ದಾಖಲೆ ಸಲ್ಲಿಸಿ
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಬರುವ ಎಲ್ಲಾ ಪಟ್ಟಣ ಹಾಗೂ ಗ್ರಾಮಗಳ ನಾಗರಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ .
ಸಂಧ್ಯಾ ಸುರಕ್ಷಾ ವೇತನದಾರರು, ವಿಧವಾ ವೇತನದಾರರು, ಅಂಗವಿಕಲ ವೇತನದಾರರು ಹೀಗೆ ಸರಕಾರದಿಂದ ಪಿಂಚಣಿ ಪಡೆಯುವ ಪಿಂಚಣಿದಾರರು ತಮ್ಮ ಪಿಂಚಣಿಗೆ ಸಂಬಂಧಿಸಿದ (ಮಂಜೂರಾದ)ಪಿಂಚಣಿ ಆದೇಶ ಪ್ರತಿ ಮತ್ತು ತಾವು ಪಿಂಚಣಿಯನ್ನು ಬ್ಯಾಂಕಿನಲ್ಲಿ ಪಡೆಯುತ್ತಿದ್ದರೆ ಆ ಬ್ಯಾಂಕ್ ಪಾಸ್ಬುಕ್ ಅಥವಾ ಪಿಂಚಣಿಯನ್ನು ಪೋಸ್ಟ್ ಆಫೀಸ್ನಲ್ಲಿ ಪಡೆಯುತ್ತಿದ್ದರೆ ಪೋಸ್ಟ್ ಪಾಸ್ಬುಕ್ ಮತ್ತು ತಮ್ಮ ಆಧಾರ್ ಕಾರ್ಡುಗಳ ಝರಾಕ್ಸ್ ಪ್ರತಿಗಳನ್ನು ಮರೆಯದೆ ತಮ್ಮ ತಮ್ಮ ಪಟ್ಟಣ ಹಾಗೂ ಗ್ರಾಮ ಚಾವಡಿಯಲ್ಲಿ ಕೂಡಲೆ ಸಲ್ಲಿಸಬೇಕು. ಕಾರಣ ಕೂಡಲೇ ಎಲ್ಲಾ ಪಿಂಚಣಿದಾರರು ತಮ್ಮ ತಮ್ಮ ದಾಖಲೆಗಳನ್ನು ತಕ್ಷಣವೇ ನೀಡಿ ತಮ್ಮ ಪಿಂಚಣಿಗೆ ಧಕ್ಕೆಯಾಗ ಹುದ ಹಾಗೆ ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದು ರಬಕವಿ-ಬನಹಟ್ಟಿ ತಾಲೂಕಾಡಳಿತಾಧಿಕಾರಿಗಳು ಈ ಮೂಲಕ ತಮಗೆ ತಿಳಿಸಿದ್ದಾರೆ.

Social Plugin