ತೇರದಾಳ ಪಟ್ಟಣದ ಕನ್ನಡ ಶಾಲೆಯ ಹತ್ತಿರ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಪ್ರಣವ್ ಮುಖರ್ಜಿ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ
ತೇರದಾಳ : ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ನಮ್ಮ ರಾಷ್ಟ್ರಕ್ಕೆ ಮುಖರ್ಜಿಯವರು ಕೊಡುಗೆ ಅಪಾರವಾದುದು ಎಂದು ವಿರಾಜ ಬಂಕಾಪೂರ ಹೇಳಿದರು.

  ಪಟ್ಟಣದ ಕನ್ನಡ ಶಾಲೆಯ ಹತ್ತಿರ ನಡೆದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಒಬ್ಬ ಶ್ರೇಷ್ಟ ತಜ್ಞರಾಗಿದ್ದ ಪ್ರಣವ್ ಮುಖರ್ಜಿಯವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಮಹಾನ್‍ವ್ಯೆಕ್ತಿಯಾದ ಅವರ ರಾಜಕೀಯ ಜೀವನ ಪಶ್ಚಿಮ ಬಂಗಾಳದಿಂದ ಪ್ರಾರಂಭವಾಯಿತು. ಈ ದೇಶಕಂಡ ಪ್ರತಿಭಾನ್ವಿತ ವ್ಯೆಕ್ತಿಗಳಲ್ಲಿ ಅವರು ಒಬ್ಬರಾಗಿದ್ದ ಪ್ರಣವ್ ಮುಖರ್ಜಿಯವರು ದೇಶದ ರಾಜಕೀಯದಲ್ಲಿ ಮಾಡಿರುವ ಸಾಧನೆ ಮತ್ತು ಕೊಡುಗೆ ಅಪಾರವಾಗಿದೆ ಎಂದರು. 
   ಮೇಣದ ಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
 ಈ ಸಂದರ್ಭದಲ್ಲಿ ಪ್ರಭು ಬಾಗಿ, ಕೇದಾರಿ ಪಾಟೀಲ, ನೇಮಣ್ಣ ಸಾವಂತನವರ, ಶೀತಲ ಬೋಳಗೊಂಡ, ಸುರೇಶ ಪರೀಟ, ಸಿದ್ದು ಅಮ್ಮಣಗಿ, ಕಾಶಿನಾಥ ರಾಠೋಡ, ವಿಶ್ವನಾಥ ಹಿರೇಮಠ, ಸದಾಶಿವ ಹೊಸಮನಿ, ಸಚೀನ ಕೊಡತೆ, ಕುಮಾರ ಸರಿಕರ, ಸತ್ಯಪ್ಪ ಚವಜ, ಮುರಗೇಶ ಮಿರ್ಜಿ ಸೇರಿದಂತೆ ಪಟ್ಟಣದ ಪ್ರಮುಖರು ಸೇರಿದಂತೆ ಇನ್ನಿತರರು ಇದ್ದರು.