ತೇರದಾಳ ಪಟ್ಟಣದ ದತ್ತ ಮಂದಿರದಲ್ಲಿ ಪ್ರತಿವರ್ಷದಂತೆ ರಾಮನಾಮ ಸಪ್ತಾಹದಲ್ಲಿ ಭಾಗವಹಿಸಿದ ಭಕ್ತರು.


ಸಂಪ್ರದಾಯದಂತೆ ತೇರಾಕೋಟಿ ರಾಮನಾಮ ಜಪ ಹಾಗೂ ಸಪ್ತಾಹ ಸಂಪನ್ನ
ತೇರದಾಳ : ಪ್ರತಿ ವರ್ಷದಂತೆ ಈ ವರ್ಷವು ಭಾದ್ರಪದ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಶ್ರೀಬ್ರಹ್ಮ ಚೈತನ್ಯ ಮಹಾರಾಜ ಗೊಂದವಲೇಖರ ಇವರ ಪರಮ ಶಿಷ್ಯರಾದ ಬ್ರಹ್ಮಾನಂದ ಮಹಾರಾಜರು(ಜಾಲಿಹಾಳ) 1909ನೇ ಇಶ್ವಿಯಲ್ಲಿ ಆರಂಭಿಸಿದ ತೇರಾಕೋಟಿ ಶ್ರೀರಾಮನಾಮ ಜಪ ಹಾಗೂ ಸಪ್ತಾಹವು ನಿರಂತರವಾಗಿ ಇಲ್ಲಿಯವರೆಗೆ ನಡೆದು ಬಂದಿದೆ. 

   ಆದರೆ ಈ ವರ್ಷ ಕೋವಿಡ್-19 ಮಹಾಮಾರಿ ಹರಡದಂತೆ ತಡೆಗಟ್ಟಲು ಸರಕಾರ ದೇಶ ರಾಜ್ಯದಲ್ಲಿನ ಎಲ್ಲ ಹಬ್ಬ ಹರಿದಿನಗಳು, ಉತ್ಸವಗಳನ್ನು ರದ್ದು ಪಡಿಸಿರುವ ಹಿನ್ನಲೆಯಲ್ಲಿ ಪಟ್ಟಣದ ದತ್ತ ಮಂದಿರದಲ್ಲಿ 1909ರಲ್ಲಿ ಬ್ರಹ್ಮಾನಂದ ಮಹಾರಾಜರು(ಜಾಲಿಹಾಳ) ಪ್ರಾರಂಭಿಸಿದ ತೇರಾಕೋಟಿ ಶ್ರೀರಾಮನಾಮ ಜಪ ಹಾಗೂ ಸಪ್ತಾಹವು ನಿಲ್ಲಬಾರದು ಎಂಬ ಸದುದ್ದೇಶದಿಂದ ಈ ವರ್ಷದ 112ನೇ ಶ್ರೀರಾಮನಾಮ ಜಪ ಹಾಗೂ ಸಪ್ತಾಹವನ್ನು ಸ್ಥಳೀಯ ಸದ್ಭಕ್ತರು ಸಂಪ್ರದಾಯದಂತೆ ಇಂದು ಬೆಳಿಗ್ಗೆ ಪ್ರಾರಂಭಿಸಿ ಸಂಪನ್ನಗೊಳಿಸಿದರು. ಈ ಕಾರ್ಯಕ್ರಮವು ಹುಣ್ಣಿಮೆಯವರೆಗೆ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರದ ಭಾಗಗಳಿಂದ ಆಗಮಿಸಿದ ಭಕ್ತವೃಂದ ಪ್ರತಿ ವರ್ಷದಂತೆ ಭಾಗವಹಿಸುತ್ತಿದ್ದರು. ಈ ಸಪ್ತಾಹದ ಅಂಗವಾಗಿ ಸತತ ಏಳು ದಿನಗಳವರೆಗೆ ಪಂಚಪಕ್ವಾನ ಸಹಿತ ಅನ್ನ ಮಹಾಪ್ರಸಾದ ನಡೆಯುತ್ತಿತ್ತು. ದೇವಸ್ಥಾನದಲ್ಲಿ ಕೀರ್ತನೆ, ಭಜನೆ, ಸಂಗೀತ ಕಾರ್ಯಕ್ರಮ, ಪ್ರವಚನ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತಿದ್ದವು. ಆದರೆ ಕೋವಿಡ್-19ರ ಪರಿಣಾಮವಾಗಿ ಈ ಯಾವುದೇ ಕಾರ್ಯಕ್ರಮಗಳು ನಡೆಯದೆ ಸಂಪ್ರದಾಯದಂತೆ ಪ್ರಾರಂಭಿಸಿ ಸಂಪನ್ನಗೊಳಿಸಲಾಯಿತು. 
     ಈ ಸಂದರ್ಭದಲ್ಲಿ ಗುರುರಾಜ ಕುಲಕರ್ಣಿ, ಬಾಳು ದೇಶಪಾಂಡೆ, ಕಿರಣ ದೇಶಪಾಂಡೆ, ನ್ಯಾಯವಾದಿ ಶ್ಯಾಮ ಸತ್ತಿಕರ, ಉದಯ ಬೆಳಗಲಿ, ವಿರಾಜ ಬಂಕಾಪೂರ, ಅಮೀತ ಪಾರಗಾಂವಕರ, ನ್ಯಾಯವಾದಿ ಸಾಗರ ಕುಲಕರ್ಣಿ, ಪ್ರಭಾಕರ ಪಾರಗಾಂವಕರ, ರಾಘವೇಂದ್ರ ಜೋಶಿ, ಪ್ರಲ್ಹಾದ ಜೋಶಿ, ರಮೇಶ ಬೆಳಗಲಿ, ಅತುಲ ದೇಶಪಾಂಡೆ, ಚಿದಂಬರ ಬಂಕ, ಪುರಸಭೆ ಮಾಜಿ ಸದಸ್ಯೆ ಅಂಜಲಿ ಕುಲಕರ್ಣಿ, ಡಾ. ಶೋಭಾ ದೇಶಪಾಂಡೆ, ಲೀಲಾ ದೇಶಪಾಂಡೆ, ರಮಾ ದೇಶಪಾಂಡೆ, ಲಕ್ಷ್ಮೀ ಬೆಳಗಲಿ, ಅನಿತಾ ಬೆಳಗಲಿ, ಸೇರಿದಂತೆ ಇನ್ನಿತರರು ಇದ್ದರು.