ರಬಕವಿಯಲ್ಲಿ ತಾಲೂಕಾ ಮಟ್ಟದ ರಾಷ್ಟ್ರೀಯ ಪೊಷಣಾ ಅಭಿಯಾನ-2020 ಯೋಜನಾ ಮಾಸಾಚರಣೆ ಸಮಾರಂಭಕ್ಕೆ ಜಿಲ್ಲಾ ಉಪ ನಿರ್ದೆಶಕ ಬಿ. ಸಿ. ಸಿದ್ದಲಿಂಗಪ್ಪ ಚಾಲನೆ ನೀಡಿದರು.

ಸರ್ಕಾರದ ಯೋಜನೆ ಸದುಪಯೋಗ ಮಾಡಿಕೊಳ್ಳಿ
ರಬಕವಿ-ಬನಹಟ್ಟಿ,ಸೆ24: ಮಹಿಳೆಯರಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಅನೇಕ ಸೌಲಭ್ಯಗಳಿದ್ದು, ಸಂಬಂದಿಸಿದವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಇಲಾಖೆಯ ಜಿಲ್ಲಾ ಉಪ ನಿರ್ದೆಶಕರಾದ ಬಿ. ಸಿ. ಸಿದ್ದಲಿಂಗಪ್ಪ ತಿಳಿಸಿದರು.
ರಬಕವಿ ನಗರದ ಗಟ್ಟಗಿ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ರಾಷ್ಟ್ರೀಯ ಪೊಷಣಾ ಅಭಿಯಾನ ಯೋಜನಾ ಮಾಸಾಸಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತೀರ ಅಪೌಷ್ಟಿಕತೆಹೊಂದಿದ ಮಕ್ಕಳ ಅಭಿವೃದ್ದಿಗೆ ಇಲಾಖೆ ಅನೇಖ ಸೌಲಭ್ಯಗಳನ್ನು ನೀಡುತ್ತಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಶೂನ್ಯವಾಗಲು ಸಿಬ್ಬಂದಿಗಳು, ಸಹಾಯಿಕಿಯರು ಪ್ರಾಮಾಣಿಕೆಯತೆಯಿಂದ ಸೇವೆ ಸಲ್ಲಿಸಬೇಕು. ಅಂದಾಗ ಮಾತ್ರ ಇದನ್ನು ಹೊಡೆದೋಡಿಸಲು ಸಾಧ್ಯ ಎಂದರು. 
ಒಂದನೆ ಗರ್ಭಿಣಿಯರಿಗೆ ಇಲಾಖೆಯಿಂದಲೇ ಸೀರೆ ಕುಪ್ಪಸ, ಹೂ ಹಣ್ಣು ಸೇರಿದಂತೆ ಅನೇಕ ಶುಭಸಮಾರಂಭದ ವಸ್ತುಗಳನ್ನಿಟ್ಟು ಸಂತೋಷದಿಂದ ಸೀಮಂತ ಕಾರ್ಯಕ್ರಮ ಮಾಡಿದ್ದು ಜನಿಸುವ ಮಗುವಿನ ಭವಷ್ಯವನ್ನು ಸುಂದರಗೊಳಿಸುತ್ತದೆ. ಅದೇ ರೀತಿ ಮಗುವಿನ ತೊಟ್ಟಿಲು ಶಾಸ್ತ್ರದ ಕಾರ್ಯಕ್ರಮ, ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ಅಂದು ಜನಿಸಿದ ಅನೇಕ ಹೆಣ್ಣು ಮಕ್ಕಳ ಜನ್ಮ ದಿನಾಚರಣೆ ಕೂಡಾ ಈ ಸಂದರ್ಭದಲ್ಲಿ ಮಾಡಿದ್ದು ನಮಗೆ ಸಂತಸ ತಂದಿದೆ. ಜೊತೆಗೆ ಇಲಾಖೆಗೆ ಗೌರವ ತಂದು ಕೊಡುವ ಕಾರ್ಯಕ್ರಮ ಇದಾಗಿತ್ತು ಎಂದರು.
ಸಮಾರಂಭದಲ್ಲಿ ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನುರಾಧಾ ಹಾದಿಮನಿ, ಹಿರಿಯ ಮೇಲ್ವಿಚಾರಕಿಯರಾದ ಎಸ್. ಎಸ್. ಚೆನ್ನಿ, ಕೆ. ಜಿ. ಕೋರೆಗೋಳ, ತೇರದಾಳ ವಲಯದ ಮೇಲ್ವಿಚಾರಕಿ ಎಸ್. ಕೆ. ಹೂಗಾರ, ಎಲ್. ವಿ. ಪತ್ತಾರ, ವಿ. ಎಸ್. ಕಂಕನವಾಡಿ ಸೇರಿದಂತೆ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿರಯರು ಇದ್ದರು.